ಬಾಲಿವುಡ್ ಅಂಗಳದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಇತ್ತೀಚೆಗೆ ನಟ ಸಿದ್ಧಾರ್ಥ್ ಹಾಗು ನಟಿ ಕಿಯಾರಾ ಅಡ್ವಾಣಿ ಮದುವೆ ಬಳಿಕ ಮತ್ತೊಂದು ಜೋಡಿ ಹಸೆಮಣೆ ಏರಲಿದೆ.
ರಾಜಕಾರಣಿ ರಾಘವ್ ಚಡ್ಡಾ ಜೊತೆಗೆ ನಟಿ ಪರಿಣಿತಿ ಜೋಪ್ರಾ ಎಂಗೇಜ್ಮೆಂಟ್ ನಡೆದಿದ್ದು, ಅಕ್ಟೋಬರ್ ತಿಂಗಳಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಇತ್ತೀಚೆಗೆ ನಟಿ ಪರಿಣಿತಿ ಚೋಪ್ರಾ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ರಾಜಕಾರಣಿ ರಾಘವ್ ಚಡ್ಡಾ ಅವರೊಂದಿಗಿನ ಒಡನಾಟ, ಸಂಬಂಧ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ.
ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ -ನಿಕ್ ಜೋನಸ್ ಭಾರತಕ್ಕೆ ಬಂದಿದ್ದರು. ಈ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ವರ್ಷ ಅಕ್ಟೋಬರ್‌ನಲ್ಲಿ ಮದುವೆ ಕೂಡ ಫಿಕ್ಸ್ ಆಗಿದೆ. ಮದುವೆಗೆ ಬೇಕಾದ ಎಲ್ಲಾ ತಯಾರಿ ನಡೆಯುತ್ತಿದೆ.
ಮಾಧ್ಯಮಗಳು ಈ ಬಗ್ಗೆ ಪರಿಣಿತಿ ಚೋಪ್ರಾ ಅವರಲ್ಲಿ ಕೇಳಿದಾಗ ಎಲ್ಲರ ಪ್ರಶ್ನೆಗೂ ನಗುವಿನ ಮೂಲಕ ಉತ್ತರ ನೀಡಿ ಹೋಗುತ್ತಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮನೆಗೆ ಪರಿಣಿತಿ ಭೇಟಿ ನೀಡಿ ಮದುವೆಗೆ ಡ್ರೆಸ್ ಆರ್ಡರ್ ನೀಡಿ ಬಂದಿದ್ದಾರೆ ಎಂದು ತಿಳಿದುಬಂದಿದೆ. ಇದು ನಟಿಯ ಮದುವೆ ಕುರಿತ ಸುದ್ದಿಗೆ ಸಾಕ್ಷಿ ಒದಗಿಸಿದೆ. ಅಕ್ಟೋಬರ್‌ನಲ್ಲಿ ಪರಿಣಿತಿ-ರಾಘವ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.