2nd PUC Result Out: ಪಿಯುಸಿ ರಿಸಲ್ಟ್ ಔಟ್: ದ. ಕನ್ನಡ ಪ್ರಥಮ, ಉಡುಪಿ ದ್ವಿತೀಯ ಸ್ಥಾನ

ನಿರೀಕ್ಷೆಗೂ ಮೊದಲೇ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ಇಂದೂ ಸಹ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿ ಇದ್ದು, ಉಡುಪಿ ಎರಡನೇ ಸ್ಥಾನದಲ್ಲಿ ಇದೆ. ಮಾರ್ಚ್ ತಿಂಗಳಿನಲ್ಲಿ ‌ನಡೆದ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದ ಕುರಿತು ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು

ಫಲಿತಾಂಶದಲ್ಲಿ ಹೆಣ್ಮಕ್ಳೇ ಸ್ಟ್ರಾಂಗು

ಬಾಲಕರು ಮತ್ತು ಬಾಲಕಿಯರ ನಡುವೆ ಪ್ರತಿವರ್ಷ ದಂತೆ ಈ ವರ್ಷವೂ 11% ವ್ಯತ್ಯಾಸ ಇದೆ. ಬಾಲಕರಲ್ಲಿ 69% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಬಾಲಕಿಯರಲ್ಲಿ 80% ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ 74% ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ.

ಒಟ್ಟು ಪರೀಕ್ಷೆಗೆ ನೋಂದಣಿ ಆದ ವಿದ್ಯಾರ್ಥಿಗಳ ಸಂಖ್ಯೆ
7,26,195 ಇದೆ. ಇರದಲ್ಲಿ ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು ಇದ್ದು 61% ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,47260 ವಿದ್ಯಾರ್ಥಿಗಳು 75% ತೇರ್ಗಡೆ ಹೊಂದಿದ್ದರೆ, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳಲ್ಲಿ ಶೇ 85 ತೇರ್ಗಡೆ ಹೊಂದಿದ್ದಾರೆ.

ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ?

ವಿದ್ಯಾರ್ಥಿಗಳು‌‌ 3,63,698

ವಿದ್ಯಾರ್ಥಿನಿಯರು 3,62,497

ಒಟ್ಟು ‌‌‌‌ 7,26,195

ಹೊಸಬರು 6.29 ಲಕ್ಷ

ಖಾಸಗಿ 25,847
ವಿದ್ಯಾರ್ಥಿಗಳು

ಪುನರಾವರ್ತಿತ 70,589 ವಿದ್ಯಾರ್ಥಿಗಳು

ಕಲಾ ವಿಭಾಗ ‌ 2,34,815

ವಾಣಿಜ್ಯ ವಿಭಾಗ. 2,47,260

ವಿಜ್ಞಾನ ವಿಭಾಗ 2,44,120

ವಿದ್ಯಾರ್ಥಿಗಳ ಸಂಖ್ಯೆ:_7,27,923

ಅರ್ಹ ,7,25821

ಗೈರು 23,754

ತೇರ್ಗಡೆ 5,24,209

ಹಾಜರು 7,02067

ಇನ್ನು ಫಲಿತಾಂಶ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ಇದ್ದು, karresults.nic ನಲ್ಲಿ ನೋಡಬಹುದಾಗಿದೆ.

ಪ್ರಥಮ ಸ್ಥಾನ

ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಮಂಗಳೂರು ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕ

ಜಯನಗರದ NMKRV ಕಾಲೇಜಿನ ಥಬಸುಮ್ ಶೇಖ್ 600ಕ್ಕೆ 593 ಅಂಕಗಳನ್ನು ಗಳಿಸಿದ್ದಾರೆ.

ದ್ವಿತೀಯ ಸ್ಥಾನದಲ್ಲಿ

ಕಲಾ ವಿಭಾಗ- 600ಕ್ಕೆ 592 ಅಂಕ ಪಡೆದ ಜಿ.ಎಲ್​ಖುಷನಾಯ್ಕ್

ಕಲಾ ವಿಭಾಗ- 600ಕ್ಕೆ 592 ಅಂಕ ಪಡೆದಿರುವ ಡಡ್ಡಿ ಕರಿಬಸಮ್ಮ

ಕಲಾ ವಿಭಾಗ- 600ಕ್ಕೆ 592 ಅಂಕ ಪಡೆದಿರುವ ಮುತ್ತೂರು ಮಲ್ಲಮ್ಮ

ಕಲಾ ವಿಭಾಗ- 600ಕ್ಕೆ 592 ಅಂಕ ಪಡೆದ ಪ್ರಿಯಾಂಕಾ ಕುಲಕರ್ಣಿ

ಕಲಾ ವಿಭಾಗ- 600ಕ್ಕೆ 592 ಅಂಕ ಪಡೆದ ರಾಹುಲ್​ ಮೋತಿಲಾಲ್ ರಾಥೋಡ್​

More News

You cannot copy content of this page