LINGAYAT CM: ಲಿಂಗಾಯತರ ಚಿಂತೆ ನಿಮಗೆ ಬೇಡ: ಡಿಕೆಶಿಗೆ ಸಚಿವ ಸಿ.ಸಿ. ಪಾಟೀಲ್ ತಿರುಗೇಟು

ಶ್ರೀ ಡಿಕೆಶಿಯವರೇ ನಮ್ಮ ನಾಡಿನಲ್ಲಿ ಲಿಂಗಾಯತರ ಡ್ಯಾಮನ್ನು ಒಡೆಯುವ ನಿಮ್ಮ ಹಗಲು ಕನಸು ಯಾವತ್ತೂ ನನಸಾಗುವುದಿಲ್ಲ. ಹಿಂದೆ ನಿಮ್ಮ ಸಿದ್ದರಾಮಯ್ಯನವರ ಸರ್ಕಾರವಿದ್ದಾಗಲೂ ಲಿಂಗಾಯತ ಸಮಾಜವನ್ನು ಒಡೆದು ಆಳುವ ಕುತಂತ್ರಕ್ಕೆ ಕೈ ಹಾಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಣೆಕಟ್ಟೆಯೇ ಒಡೆದು ಹೋಗಿ ಒಣಗಿತ್ತು ಎಂಬುದನ್ನು ಜನ ಇನ್ನೂ ಮರೆತಿಲ್ಲ. ಕಾಂಗ್ರೆಸ್ಸಿನಿಂದ ಮುಂದೆ ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳುವ ತಾಕತ್ತು ನಿಮಗಿದೆಯೇ ? ಹಿಂದೆ ಹಿರಿಯ ಮುತ್ಸದ್ದಿ ಶ್ರೀ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೇಗೆ ಹೀನಾಯವಾಗಿ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ನೀವು ಏನೇ ಮಾಡಿದರೂ ಲಿಂಗಾಯತರ ಅಣೆಕಟ್ಟೆ ಸದಾ ಬಿಜೆಪಿ ಪರ ಸಮೃದ್ಧ ಅಲೆಗಳಿಂದ ತುಂಬಿರುತ್ತದೆ. ಈ ಅಣೆಕಟ್ಟೆಗೆ ಕೈ ಹಾಕುವ ನಿಮ್ಮ ವ್ಯರ್ಥ ಪ್ರಯತ್ನ ಯಾವತ್ತೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ನೀವು ಮರೆಯಬೇಡಿ ಎಂದು ಡಿಕೆ ಶಿವಕುಮಾರ್ ಗೆ ಸಚಿವ ಸಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

More News

You cannot copy content of this page