COINCIDENCE?: ಮೋದಿಯವರು ಉದ್ಘಾಟಿಸಿದ ಹೈವೆ ಮಳೆಯಲ್ಲಿ ಮುಳುಗಿತು, ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗಿತು ಇದು ಕಾಕತಾಳೀಯವೇ : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಅದೇ ರೀತಿಯಲ್ಲಿ ಆರೋಪ ಪ್ರತ್ಯಾರೋಪಗಳು ಹೆಚ್ಚುತ್ತಿದೆ. ಆದರೆ ಇಂದು ಕಾಂಗ್ರೆಸ್ ಮಾಡಿದ ಟ್ವೀಟ್ ಅನೇಕರ ಕಣ್ಣು ತೆರೆಸಿದೆ. ಚುನಾವಣೆ ಮುನ್ನವೇ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಹಲವಾರು ಬಾರಿ ಆಗಮಿಸಿ ಚುನಾವಣಾ ರಣತಂತ್ರ ರೂಪಿಸುವಲ್ಲಿ ತಲ್ಲೀನರಾಗಿದ್ದಾರೆ.

https://twitter.com/INCKarnataka/status/1649630880800059392?s=20


ಹಾಗೆಯೇ ಅನೇಕ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟಿಸಿದ್ದಾರೆ. ಅದನ್ನೇ ಇಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ಇದು ಕಾಕತಾಳೀಯವೇ ಎಂದು ಪ್ರಶ್ನಿಸಿದೆ. ಕಾಂಗ್ರೆಸ್ ಪ್ರಧಾನಿ ಮೋದಿಯವರಿಗೆ ಟಿಕೀಸಿದ ರೀತಿ ಈ ರೀತಿ ಇದೆ.
ಮೋದಿಯವರು ಉದ್ಘಾಟಿಸಿದ ಹೈವೆ ಮಳೆಯಲ್ಲಿ ಮುಳುಗಿತು, ಟೇಪ್ ಕಟ್ ಮಾಡಿದ ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗಿತು, ರೋಡ್ ಶೋ ಮಾಡಿದ ರಸ್ತೆ ಕಿತ್ತುಬಂತು, ಶಿವಮೊಗ್ಗ ಏರ್ಪೋರ್ಟ್ ಬಾಗಿಲು ಮುಚ್ಚಿತು, ಬೆನ್ನಿಗೆ ಗುದ್ದಿದ ರಾಮದಾಸ್ ಮನೆಯಲ್ಲಿ ಕೂರುವಂತಾಯ್ತು, ಕರೆ ಮಾಡಿದ ಈಶ್ವರಪ್ಪರ ರಾಜಕೀಯ ಜೀವನ ಮುಗಿಯಿತು, ಇದೇನು ಕಾಕತಾಳೀಯ ?ಎಂದು ಪ್ರಶ್ನಿಸಿದೆ.

More News

You cannot copy content of this page