Shobha Plan To Finish BSY: ಯಡಿಯೂರಪ್ಪರನ್ನ ಮುಗಿಸೋಕೆ ಶೋಭಾ ಕರಂದ್ಲಾಜೆ ಏನೇನ್ ಪ್ಲಾನ್ ಮಾಡಿದ್ರು ಎಲ್ಲವನ್ನು ಬಿಚ್ಚಿಡ್ತೀವಿ: ಡಿಕೆ ಶಿವಕುಮಾರ್

ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರನ್ನ ಮುಗಿಸೋಕೆ ಕುದ್ದು ಶೋಭಾ ಕರಂದ್ಲಾಜೆ ನೇ ಅವರ ಪಕ್ಷದಲ್ಲಿ ಏನೇನು ಮಾಡಿದ್ರು ಎಂದು ಗೊತ್ತಿದೆ. ಅವರು ನಮ್ಮ ಬಗ್ಗೆ ಡೀಟೇಲ್ ಆಗಿ ಹೇಳಿದ್ರೆ. ನಾವು ಕೂಡ ಅವರು ಯಡಿಯೂರಪ್ಪ ಅವರನ್ನ ಮುಗಿಸೋಕೆ ಏನೇನ್ ಪ್ಲಾನ್ ಮಾಡಿದ್ರು ಎಂದು ಎಲ್ಲವನ್ನು ಬಿಚ್ಚಿಡ್ತೀವಿ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ ಅವರನ್ನು ಎಂಬಿ ಪಾಟೀಲ್ ಮುಗಿಸುತ್ತಾರೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರದ ಕುರಿತು ಸದಾಶಿವನಗರದ ನಿವಾಸದಲ್ಲಿ ತಿರುಗೇಟು ನೀಡಿದ ಅವರು, ಬಿಎಸ್ ಯಡಿಯೂರಪ್ಪ ಅವರನ್ನ ಮುಗಿಸೋಕೆ ಕುದ್ದು ಶೋಭಾ ಕರಂದ್ಲಾಜೆ ನೇ ಸೇರಿಕೊಂಡು ಅವರ ಪಕ್ಷದಲ್ಲಿ ಏನೇನು ಮಾಡಿದ್ರು ಅಂತಾ ಗೊತ್ತಿದೆ. ಅವರು ನಮ್ಮ ಬಗ್ಗೆ ಡೀಟೇಲ್ ಆಗಿ ಹೇಳಿದ್ರೆ. ನಾವು ಕೂಡ ಅವರು ಯಡಿಯೂರಪ್ಪ ಅವರನ್ನ ಮುಗಿಸೋಕೆ ಏನೇನ್ ಪ್ಲಾನ್ ಮಾಡಿದ್ರು ಅನ್ನೋದನ್ನ ಎಲ್ಲವನ್ನು ಬಿಚ್ಚಿಡ್ತೀವಿ ಎಂದು ಹೇಳುವ ಮೂಲಕ ಶೋಭಾ ಕರಂದ್ಲಾಜೆ ವಿರುದ್ಧ
ಬಾಂಬ್ ಸಿಡಿಸಿದರು. ನಾನು ೪೦% ಕಮಿಷನ್ ಹೊಡೆದಿಲ್ಲ.‌ ಅಭ್ಯರ್ಥಿಗಳ ಟಿಕೆಟ್ ಅರ್ಜಿಗೆ ಹಣ ಪಡೆದಿದ್ದೇವೆ. ಬಿಲ್ಡಿಂಗ್ ಫಂಡ್ ಅಂತ ಪಡೆದಿದ್ದೇವೆ. ನಿಮ್ಮ ೪೦ % ಕಮಿಷನ್ ಗೆ ಹಲವು ಸಾಕ್ಷಿ ಸಿಕ್ಕಿವೆ. ಅದಕ್ಕೆ ಮಡಾಳ್ ಪ್ರಕರಣವೇ ಸಾಕ್ಷಿ ಇದೆ ಎಂದರು.

“ನನ್ನ ನಾಮಿನೇಷನ್ ರಿಜೆಕ್ಟ್ ಮಾಡಿಸಲು ದೊಡ್ಡ ಲೀಗಲ್ ಟೀಮ್ ಕನಕಪುರದಲ್ಲಿ‌ ನಿಂತುಕೊಂಡಿದೆ”

ಸಿಎಂ ಕಚೇರಿಯಿಂದ ನಾಮಿನೇಷನ್ ಡೌನ್‌ಲೋಡ್ ಮಾಡಲಾಗ್ತಿದೆ. ಬೇಕಿದ್ರೆ ಸಿಎಂ ಕಚೇರಿಯ ದೂರವಾಣಿ ಮಾಹಿತಿ ತೆಗೆದುಕೊಳ್ಳಿ. ನೇರವಾದ ಆರೋಪ ಮಾಡ್ತಾ ಇದ್ದೇನೆ. ಚುನಾವಣಾ ಆಯೋಗ ಯಾವುದೇ ಒತ್ತಡಕ್ಕೆ ಮಣಿಯದೇ ಕ್ರಮವಹಿಸಿ ಎಂದು ಸಿಎಂ ಕಚೇರಿ ಮೇಲೆ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು

“ಸಿಎಂ ಕಛೇರಿಯಿಂದ ನಾಮಿನೇಷನ್ ಡೌನ್‌ಲೋಡ್ ಮಾಡಿ, ಕ್ಯಾನ್ಸಲ್ ಮಾಡಿಸುವ ಪ್ರಕ್ರಿಯೆ ನಡೀತಿದೆ”

ಬಿಜೆಪಿ ಸಿಎಂ ಕಚೇರಿ ಮತ್ತು ಲೀಗಲ್ ಟೀಮ್ ಷಡ್ಯಂತ್ರ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿಗಳ ನಾಮಿನೇಷನ್ ತಿರಸ್ಕಾರ ಮಾಡಲು ಪ್ರಯತ್ನ ನಡೀತಾ ಇದೆ. ಕಾಂಗ್ರೆಸ್ ಅಭ್ಯರ್ಥಿಗಳ ನಾಮಿನೇಷನ್ ಡೌನ್‌ಲೋಡ್ ಮಾಡಲಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು. ನನ್ನ ನಾಮಿನೇಷನ್ ಅತಿ ಹೆಚ್ಚು ಡೌನ್‌ಲೋಡ್ ಆಗಿದೆ. ದೊಡ್ಡ ಲೀಗಲ್ ಟೀಮ್ ಕನಕಪುರದಲ್ಲಿ‌ ನಿಂತುಕೊಂಡಿದೆ. ಯಾಕೆ ಅಷ್ಟು ಡೌನ್‌ಲೋಡ್ ಮಾಡಿಕೊಂಡಿದ್ದಾರೆ..?
ಇದರರ್ಥ ನನ್ನ ನಾಮಿನೇಷನ್ ರಿಜೆಕ್ಟ್ ಆಗಬೇಕು ಎಂಬ ಉದ್ದೇಶ. ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಮಸ್ಯೆ ಇದೆ. ಸಾಕಷ್ಟು ಬಿಜೆಪಿ ಅಭ್ಯರ್ಥಿಗಳ ನಾಮಿನೇಷನ್ ಸಮಸ್ಯೆ ಇದೆ. ನನ್ನ ನಾಮಿನೇಷನ್ ರಿಜೆಕ್ಟ್ ಮಾಡುವ ಪ್ರಯತ್ನ ಮಾಡಿದ್ರಿ. ನನಗೆ ಹೀಗೆ ಆದ್ರೆ ಸಾಮಾನ್ಯ ಅಭ್ಯರ್ಥಿ ಕತೆ ಏನು..? ಚುನಾವಣಾ ಆಯೋಗ ಯಾವುದೇ ಒತ್ತಡಕ್ಕೆ ಮಣಿಯಬಾರದು. ನೇರವಾಗಿ ಸಿಎಂ ಕಚೇರಿ ಡೌನ್‌ಲೋಡ್ ಮಾಡಲಾಗುತ್ತಿದೆ. ಸಿಎಂ ಕಚೇರಿಯ ದೂರವಾಣಿ ಮಾಹಿತಿ ತೆಗೆದುಕೊಳ್ಳಿ. ನೇರವಾದ ಆರೋಪ ಮಾಡ್ತಾ ಇದ್ದೇನೆ. ದಯವಿಟ್ಟು ಇದರ ಬಗ್ಗೆ ತನಿಖೆ ‌ಮಾಡಿಸಿ ಎಂದು ಸಿಎಂ ಕಚೇರಿ ಮೇಲೆ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು

ಶೆಟ್ಟರ್ ಮೇಲೆ ಬಿಜೆಪಿ ನಿಗಾ ವಿಚಾರದ ಕುರಿತು ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನಮ್ಮ ನಾಯಕರು.‌ ಸ್ಟಾರ್ ಕ್ಯಾಂಪೆನರ್, ಅವರ ವಿರುದ್ಧ ಯಾವ ಷಡ್ಯಂತ್ರ ನಡೆಯಲ್ಲ. ಬಿಜೆಪಿ ಡ್ಯಾಮ್ ಈಗಾಗಲೇ ಒಡೆದು ನೀರು‌ ಬರ್ತಾ ಇದೆ. ಪಕ್ಕದಲ್ಲಿ ಇದ್ದ ಮಾಜಿ ಶಾಸಕರನ್ನು ತೊರಿಸಿದ ಡಿಕೆಶಿ, ಇಲ್ಲಿ ಬಂದಿದೆ ನೋಡಿ ಬಿಜೆಪಿ ನೀರು.
ಬಿಜೆಪಿ ಕೆರೆ, ಬಾವಿ ಎಲ್ಲ ನೀರು ಖಾಲಿಯಾಗುತ್ತಿದೆ ಎಂದು ಸಿಎಂ ಆರೋಪಕ್ಕೆ ತಿರುಗೇಟು ನೀಡಿದರು.

More News

You cannot copy content of this page