ಅಗ್ನಿಸಾಕ್ಷಿ ಕಿರುತೆರೆ ಸೇರಿದಂತೆ ಹಲವು ಸೀರಿಯಲ್, ಸಿನಿಮಾದಲ್ಲಿ ನಟಿಸಿದ್ದ 35 ವರ್ಷದ ಸಂಪತ್ ಜಯರಾಮ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಏಪ್ರಿಲ್ 22 ರಂದು ನೆಲಮಂಗಲದಲ್ಲಿ ನಟ ಸಂಪತ್ ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಬ್ಯುಸಿ ಇದ್ದ ಸಂಪತ್ ಜಯರಾಮ್, ಈಚೆಗಷ್ಟೇ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು.
ಸಂಪತ್ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಸಹ ಕಲಾವಿಧ ರಾಜೇಶ್ ಧ್ರುವ ಸ್ನೇಹಿತನ ದುರಂತ ಅಂತ್ಯಕ್ಕೆ ಕಂಬನಿ ಮಿಡಿದಿದ್ದಾರೆ.

ಸಂಪತ್ ನಿಧನಕ್ಕೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಆದರೆ
ಚಿತ್ರರಂಗದಲ್ಲಿ ಸೂಕ್ತ ಅವಕಾಶ ಸಿಗದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ವಿಚಾರ ಸ್ನೇಹಿತರ ವಲಯದಿಂದ ಕೇಳಿ ಬಂದಿದೆ. ಸಿನಿಮಾ ಜಗತ್ತಿನಲ್ಲಿ ಹೇಗಾದ್ರೂ ಮಾಡಿ ಸೈ ಅನಿಸ್ಕೊಳ್ಬೇಕು ಎಂದು ನಟ ಸಂಪತ್ ಎಷ್ಟೇ ಪ್ರಯತ್ನ ಮಾಡಿದರೂ ಸರಿಯಾದ ಸಿನಿಮಾದ ಅವಕಾಶಗಳು ಸಿಕ್ಕಿರಲಿಲ್ಲವಂತೆ. ಇದರಿಂದಾಗಿ ಯೇ ಸಂಪತ್ ತೀವ್ರ ಬೇಸರ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿಯೇ ಆತ್ಮಹತ್ಯೆ ನಿರ್ಧಾರ ಮಾಡಿದ್ರಾ ಎಂಬ ಚರ್ಚೆಯು ಇದೆ. ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಸಂಪತ್ ಇದೀಗ ಇಹಲೋಕ ತ್ಯಜಿಸಿರುದಕ್ಕೆ ಕುಟುಂಬದ ವರು, ಚಿತ್ರರಂಗದ ಸ್ನೇಹಿತರು, ಆಪ್ತರು ಕಂಬನಿ ಮಿಡಿದಿದ್ದಾರೆ.