ಬೆಂಗಳೂರು: ರಮ್ಯಾ ಅವರನ್ನು ನಮ್ಮ ಪಕ್ಷಕ್ಕೆ ಕರೆಯುವಷ್ಟು ನಾವು ಬರಗೆಟ್ಟಿಲ್ಲ. ನಮ್ಮಪಕ್ಷ ಅಷ್ಟು ಕೆಳಗೆ ಹೋಗಿಲ್ಲ. ನಾವು ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಅಂತಹ ಮಾಜಿ ಸಿಎಂ ಹಾಗೂ ಮಾಜಿ ಡಿಸಿಎಂಗೆ ಟಿಕೆಟ್ ಕೊಟ್ಟಿಲ್ಲ. ಅಂತಹುದರಲ್ಲಿ ರಮ್ಯಾರನ್ನು ಕರೆಯುತ್ತೇವಾ?
ಅದೆಲ್ಲಾ ಸುಳ್ಳು ಎಂದು ಆರ್ ಅಶೋಕ್ ವ್ಯಂಗ್ಯ ಮಾಡಿದರು.
“ಚುನಾವಣೆ ಹಿನ್ನಲೆಯಲ್ಲಿ ರಮ್ಯಾ ಹಿರೋ ಆಗೋಕೆ ಪ್ರಯತ್ನ ಮಾಡ್ತಿದ್ದಾರೆ”

ಪಕ್ಷಕ್ಕೆ ಬರುವಂತೆ ಬಿಜೆಪಿಯಿಂದ ಕರೆ ಬರುತ್ತಿದೆ ಎಂದು ನಟಿ ರಮ್ಯಾ ಹೇಳಿಕೆ ಕುರಿತು ಮಾತನಾಡಿದ ಶಾಸಕ ಆರ್ ಅಶೋಕ್, ರಮ್ಯಾ ಅವರು ಮೂಲ ಕಾಂಗ್ರೆಸ್ಸಿಗರು.
ಅವರು ಕಾಂಗ್ರೆಸ್‌ನಲ್ಲಿ ಮಾಧ್ಯಮಗಳನ್ನು ನಿಯಂತ್ರಣ ಮಾಡುವ ಕೆಲಸ ಮಾಡುತ್ತಿದ್ರು. ಈಗ ಚುನಾವಣೆ ಬಂದಿದೆ.ಇಂತಹ ಸಂದರ್ಭದಲ್ಲಿ ಪ್ರಚಾರಕ್ಕಾಗಿ ರಮ್ಯಾ ಹೀಗೆ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಿರೋ ಆಗಲು ಹೋಗ್ತಿದ್ದಾರೆ. ಅವ್ರು ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ. ಅವ್ರು ಅಲ್ಲೇ ಇರಲಿ. ಅದೇ ಒಳ್ಳೆಯದು ಎಂದರು.
“ಕಾಂಗ್ರೆಸ್ ಸರ್ವನಾಶ ಆಗುತ್ತದೆ”
ಲಿಂಗಾಯತರ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಮಾತನಾಡಿದ ಅವರು, ಲಿಂಗಾಯತರ ಬಗ್ಗೆ ಸಿದ್ಧರಾಮಯ್ಯ ಮಾತನ್ನಾಡಿ ಅಡಿಗಲ್ಲು ಹಾಕಿದ್ದಾರೆ.
ನಾನು ಇಂದು ಹೇಳುತ್ತಿದ್ದೇನೆ, ಕಾಂಗ್ರೆಸ್ ಸರ್ವನಾಶ ಆಗುತ್ತದೆ. ಈ ಚುನಾವಣೆಯ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿ ಸರ್ವನಾಶ ಆಗುತ್ತದೆ.ಭ್ರಷ್ಟಾಚಾರದ ಬಗ್ಗೆ ಇಂದು ಸಿದ್ಧರಾಮಯ್ಯ ಮಾತನ್ನಾಡುತ್ತಾರೆ.ಲಿಂಗಾಯತರೆಲ್ಲಾ ಭ್ರಷ್ಟರು ಅಂತಾರೆ. ಈ ಹಿಂದೆ ವೀರೇಂದ್ರ ಪಾಟೀಲ್‌ರನ್ನು ಹೊರಗೆ ಹಾಕಿ, ಕಾಂಗ್ರೆಸ್ ಇಂದಿಗೂ ಸುಧಾರಿಸಿಕೊಳ್ಳುತ್ತಿದೆ. ಈಗ ಮತ್ತೆ ಲಿಂಗಾಯತರ ಬಗ್ಗೆ ಮಾತನಾಡಿ, ಅಡಿಗಲ್ಲು ಹಾಕಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಸರ್ವನಾಶ ಆಗಲಿದೆ ಎಂದ ಆರ್.ಅಶೋಕ್ ಹೇಳಿದರು.