ಮಂಗಳೂರು: ಖ್ಯಾತ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದ ವತಿಯಿಂದ ಶಿಲ್ಪಾ ಶೆಟ್ಟಿ ಕುಟುಂಬವನ್ನು ಬರಮಾಡಿಕೊಂಡು ಗೌರವಿಸಲಾಯಿತು. ದೇವರ ಶೇಷ ವಸ್ತ್ರ ಪ್ರಸಾದ ನೀಡಲಾಯಿತು.

ನಂತರ ಯಕ್ಷಗಾನವನ್ನು ವೀಕ್ಷೀಸಿದ ಶಿಲ್ಪಾ ಶೆಟ್ಟಿ ಕಲೆಯ ಬಗ್ಗೆ ಬಹಳ ಖುಷಿ ಪಟ್ಟರು. ಶಿಲ್ಪಾ ಅವರ ಜೊತೆ ಪತಿ ರಾಜ್ ಕುಂದ್ರ, ತಂಗಿ ಶಮಿತಾ ಶೆಟ್ಟಿ ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು. ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಈ ಸಂದರ್ಭ ಉಪಸ್ಥಿತರಿದ್ದರು.