ಕಡಿಮೆ ಮಾರ್ಕ್ಸ್ ಬಂತು.. ಜೀವನವೇ ಮುಗಿದು ಹೋಯ್ತು ಎಂದು ಸುಮಾರು ಜನಕ್ಕೆ ಅನಿಸಿರುತ್ತದೆ. ಆದರೆ ದಯವಿಟ್ಟು ಅದನ್ನು ತಳ್ಳಿ ಹಾಕಿ. ಅದಲ್ಲ ವಿಷಯ. ಜೀವನದಲ್ಲಿ ಮತ್ತೇ ಮತ್ತೇ ಅವಕಾಶ ಬರುತ್ತಲೇ ಇರುತ್ತೆ ರೀ ಎಂದು ನಟ ರಮೇಶ್ ಅರವಿಂದ್ ವಿದ್ಯಾರ್ಥಿ ಗಳಿಗೆ ಭರವಸೆ ತುಂಬಿದ್ದಾರೆ.
ಪಿಯು ಫಲಿತಾಂಶ ಬಂದ ಕುರಿತು ಖಾಸಗಿ ಚಾನಲ್ ಗೆ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಎಲ್ಲರಿಗೂ ಶುಭಾಶಯ. ಓವರ್ ಆಲ್ ಮಾರ್ಕ್ಸ್ ನೋಡಿದಾಗ ಚನ್ನಾಗಿ ಬಂದಿದೆ. ಹಾಗೇ ಪಿಯುಸಿನಲ್ಲಿ ತೀರ ಕಡಿಮೆ ಮಾರ್ಕ್ಸ್ ಬಂದಿದೆ ಅಂತ ಬೇಸರ ಮಾಡಿಕೊಂಡವ್ರು ಇದ್ದಾರೆ. ಹೌದು ಕಡಿಮೆ ಮಾರ್ಕ್ಸ್ ಬರುತ್ತದೆ. ಜೀವನವೇ ಮುಗಿದು ಹೋಯ್ತು ಎಂದು ಸುಮಾರು ಜನಕ್ಕೆ ಅನಿಸಿರುತ್ತದೆ. ಆದರೆ ದಯವಿಟ್ಟು ಅದನ್ನು ತಳ್ಳಿ ಹಾಕಿ. ಅದಲ್ಲ ವಿಷಯ. ಜೀವನದಲ್ಲಿ ಮತ್ತೇ ಮತ್ತೇ ಅವಕಾಶ ಬರುತ್ತೆ ರೀ.. ಯಾರಿಗೆ ಗೊತ್ತು.. ತೀರ ಬಡತನದಲ್ಲಿ ಬೆಳೆದ ಹುಡುಗ ಅಬ್ದುಲ್ ಕಲಾಂ ಸೈಂಟಿಸ್ಟ್ ಆಗಿ, ಭಾರತದ ಪ್ರೆಸಿಡೆಂಟ್ ಕೂಡ ಆಗ್ಲಿಲ್ವಾ..? ನಾನು ಇಂಜಿನಿಯರ್ ಆಗ್ಬೇಕೆಂದಿದ್ದೆ ಆದರೆ ಆ್ಯಕ್ಟರ್ ಆಗಿದ್ದೇನೆ. ಯಾರಿಗೆ ಗೊತ್ತಿತ್ತು.. ನಾನ್ ಆ್ಯಕ್ಟರ್ ಆಗ್ತೇನೆ ಅಂತ..? ಜೀವನ ನಿಮ್ಮನ್ನು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತದೆಯೋ.. ಏನೇನು ಅದ್ಭುತ ನಿಮಗಾಗಿ ಕಾದಿದೆಯೋ ಯಾರಿಗೆ ಗೊತ್ತು..? ಯಾವುದೂ ಸಣ್ಣದಲ್ಲ. ಅದು ಮಾತ್ರ ನಿಜ. ನಿಮ್ಮಲ್ಲಿ ಅಪಾರ ಶಕ್ತಿ ಇದೆ.ಪ್ಲೀಸ್ ಕಾನ್ಫಿಡೆನ್ಸ್ ಲೂಸ್ ಮಾಡ್ಕೊಳ್ಬೇಡಿ. ನೀವೇನಾದ್ರು ಸೋತಿದ್ರೆ ಎಗ್ಸಾಮ್ ನಲ್ಲಿ ಸೋತಿದ್ದೀರಿ ಅಷ್ಟೇ.. ಲೈಫ್ ನಲ್ಲಿ ಅಲ್ಲ, ನೀವು ಸೋತಿಲ್ಲ. ಮರೆಯಬೇಡಿ ಎಂದು ಹುಮ್ಮಸ್ಸು ತುಂಬಿಸಿದರು.

ಬದ್ಕಿನಲ್ಲಿ ಎರಡು ರೀತಿಯ ಅವಕಾಶ ಇರುತ್ತದೆ. ಒಂದು ನಮ್ಮ ಕಣ್ಣಮುಂದಿದ್ರೂ ಗೊತ್ತಾಗಲ್ಲ. ಉದಾಹರಣೆಗೆ ಊಬರ್, ಓಲಾ ಸೇರಿದಂತೆ ಸಾಕಷ್ಟು ಐಡಿಯಾ ನಮ್ಮ ಮುಂದೆಯೇ ಓಡಾಡುತ್ತಿವೆ. ಇನ್ನಷ್ಟು ಮಂದಿಯದ್ದು ಕ್ಲಿಯರ್ ಆಪರ್ಚುನಿಟಿ. ಎಲ್ಲಿರಗೂ ಕಾಣ್ತಿದೆ. ಕಣ್ಣ ಮುಂದೆಯೇ ಸಿಕ್ಕಿ ಬಿಡುತ್ತದೆ. ಪಿಯು ನಂತರ ನೀವು ನಿರ್ಧಾರ ತೆಗೆದುಕೊಳ್ಳುತ್ತೀರಲ್ಲಾ.. ಅದು ನಿಮ್ಮ ಕಣ್ಣ ಮುಂದೆಯೇ ಇರುವ ಅದ್ಭುತವಾದ ನಿರ್ಧಾರ. ಈಗ ನೀವು ಏನನ್ನು ತೆಗೆದುಕೊಳ್ಳಬೇಕೆಂದು ನಿರ್ಧಾರ ಮಾಡ್ತಿರೋ ಅದೇ ಅದ್ಭುತ ಬದುಕನ್ನು ರೂಪಿಸುತ್ತದೆ.
ಇದು ಕಣ್ಣ ಮುಂದೆ ಇರುವ ದೊಡ್ಡ ಅವಕಾಶ.. ಇದನ್ನು ಸುಮ್ಮನೆ ತಳ್ಳಿಬಿಡಬೇಡಿ ಎಂದು ಸ್ಪೂರ್ತಿ ತುಂಬಿದರು.
ಕೂತು ಯೋಚನೆ ಮಾಡಿ. ನಿಮ್ಮ ಅಭಿರುಚಿ ಏನಿದೆ..? ನಿಮ್ಗೆ ಏನು ಮಾಡೋದು ತುಂಬ ಪ್ರಿಯ ಅನಿಸುತ್ತದೆ..? ನಿಮಗೆ ಯಾವುದರಲ್ಲಿ ಸೆಳೆತ ಇದೆ ಅದನ್ನು ಆಯ್ಕೆ ಮಾಡಿ. ಈಗ ನೀವು ನಿರ್ಧಾರ ಮಾಡೋದು ಮುಂದಿನ 50 ವರ್ಷ ಮುಂದುವರೆಯುತ್ತದೆ. ಹೀಗಾಗಿ ಏನೇ ಕೋರ್ಸ್, ನಿರ್ಧಾರ ಮಾಡಿದರೂ ಆ ಕಡೆ ಅಷ್ಟು ಸೆಳೆತ ನಿಮಗೆ ಇರಬೇಕು, ಇಂಟರೆಸ್ಟ್ ಇದ್ರೆ ಮಾತ್ರ ಆಯ್ಕೆ ಮಾಡಿ. ಅದ್ಭುತವಾದ ಭವಿಷ್ಯ ನಿಮಗೆಲ್ಲರಿಗೂ ಕಾದಿದೆ ಎಂದು ಶುಭ ಹಾರೈಸಿದರು.