ಮಾಧುರಿಗಿಂತ ನನಗೆ ಕಂಗನಾ ಗ್ರೇಟ್ ಅನಿಸ್ತಾರೆ ಎಂಬ ನಟಿ, ಫ್ಯಾಷನ್ ಡಿಸೈನರ್ ಊರ್ಫಿ ಜಾವೇದ್ ಹೇಳಿಕೆ ಸಧ್ಯ ಬಾಲಿವುಡ್ ಅಂಗಳದಲ್ಲಿ ಚರ್ಚೆ ಹುಟ್ಟುಹಾಕಿದೆ.
ಸದಾ ಡಿಫರೆಂಟ್ ಸ್ಟೈಲ್ ಮೂಲಕ ನೋಡುಗರ ನಿದ್ದೆ ಗೆಡಿಸುತ್ತಿದ್ದ ಚೆಲುವೆ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ
ಬಾಲಿವುಡ್ ದಕ್ ದಕ್ ಬೆಡಗಿ ಮಾಧುರಿ.. ನಾನಾಯ್ತು ನನ್ ಫ್ಯಾಷನ್ ಜಗತ್ತಾಯ್ತು ಎಂದಿದ್ದ ಊರ್ಫಿಗೆ
ಬಾಲಿವುಡ್ ಸೂಪರ್ ಸ್ಟಾರ್ ಬೆಡಗಿಯಿಂದ ಸಮಸ್ಯೆ ಆಗಿದ್ಯಂತೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಊರ್ಫಿ ಕಂಗನಾ ಯಾಕೆ ಆಗಾಗ ಬಾಲಿವುಡ್ ಜನರ ಬಗ್ಗೆ ತಿರುಗಿ ಬೀಳುತ್ತಿರುತ್ತಾರೆ ಎಂದು ಈಗ ನನಗೆ ಅರ್ಥ ವಾಗುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಊರ್ಫಿ, ಕಾರ್ಯಕ್ರಮವೊಂದರ ಆಯೋಜಕರು ನನಗೆ ಕರೆ ಮಾಡಿ, ಅತಿಥಿಯಾಗಿ ಬರಬೇಕು ಎಂದು ಹೇಳಿದ್ದರು. ನಾನು ಸಹ ಬರುವುದಾಗಿ ಒಪ್ಪಿಕೊಂಡಿದ್ದೆ. ಹೀಗಾಗಿ ನಾನು ನನಗೆ ನಿಗದಿ ಆದ ಕೆಲಸಗಳನ್ನು ಮುಂದಕ್ಕೆ ಹಾಕಿ ರೆಡಿಯಾದೆ. ಕಾರ್ಯಕ್ರಮದ ದಿನ ಆಯೋಜಕರು ಕರೆ ಮಾಡಿ, ನಿಮಗೆ ಆಹ್ವಾನವಿಲ್ಲ ಎಂದು ಹೇಳುತ್ತಾರೆ. ಏನಾಯ್ತು..? ಎಂದು ನಾನು ಕಾರಣ ಕೇಳಿದೆ. ಅದಕ್ಕೆ ಅವರು ಮಾಧುರಿ ಅವರ ಅತಿಥಿ ಲಿಸ್ಟ್ ನಲ್ಲಿ ನೀವು ಇಲ್ಲ ಎಂದರಂತೆ. ಇದಕ್ಕೆ ಸಿಟ್ಟಾದ ನಟಿ ಊರ್ಫಿ, ಸೋಷಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಹಾಕಿ ಗರಂ ಆದರು.
ಈ ಘಟನೆಯಿಂದ ನನಗೆ ಅವಮಾನ ಆಗಿದೆ. ಬಾಲಿವುಡ್ ಬಗ್ಗೆ ಕಂಗನಾ ಆಗಾಗ ಉರಿದು ಬೀಳುತ್ತಾರೆ. ಅವರು ಯಾಕೆ ಹಾಗೆ ಮಾಡುತ್ತಾರೆ ಎಂದು ನನಗೆ ಬೇಸರ ಅನಿಸುತ್ತಿತ್ತು. ಈಗೀಗ ಅದು ನನಗೆ ಅರ್ಥವಾಗುತ್ತಿದೆ.
ಇಂತಹ ಅವಮಾನಗಳ ವಿರುದ‍್ಧ ಕಂಗನಾ ಧ್ವನಿ ಎತ್ತುತ್ತಲೇ ಇರುತ್ತಾರೆ. ಕಂಗನಾ ಕಷ್ಟದ ಹಾದಿಯಲ್ಲಿ ಸಾಗಿ ಬಂದು ಸ್ಟಾರ್ ಆಗಿದ್ದಾರೆ. ಹೀಗಾಗಿ ನನಗೆ ಮಾಧುರಿಗಿಂತ ಕಂಗನಾ ಗ್ರೇಟ್ ಅನಿಸುತ್ತಾರೆ ಎಂದು ಉರ್ಫಿ ಜಾವೇದ್ ಹೊಗಳಿದ್ದಾರೆ.