KANTARA 2: ಮತ್ತೊಂದು ‌ಅಚ್ಚರಿ ಕಥೆ ಹೊತ್ತು ಬರಲಿದೆ ಕಾಂತಾರ 2: ಮೊದಲ ಹಂತದ ಸ್ಕ್ರಿಪ್ಟ್ ಡ್ರಾಫ್ಟ್ ರೆಡಿ

ಮತ್ತೊಂದು ಅಚ್ಚರಿ ಕಥೆಗೆ ವೇದಿಕೆ ಸಿದ್ದಗೊಂಡಿದೆ. ಈಗಾಗಲೇ ಕಾಂತಾರ ಸಿನಿಮಾ ಮೂಲಕ ಸಿನಿ ದುನಿಯಾದಲ್ಲಿ ಹಂಗಾಮ ಸೃಷ್ಟಿಸಿದ್ದ ನಟ, ನಿರ್ದೇಶಕ ರಿಷಬ್ ಮತ್ತೊಂದು ಸಾಹಸ ಕಥೆಗೆ ಕೈ ಹಾಕಿದ್ದಾರೆ. ಕಾಂತಾರ ಸಕ್ಸಸ್ ಬೆನ್ನಲ್ಲೇ ಕಾಂತಾರ 2 ಸಿನಿಮಾ ನಿರ್ದೇಶಕ ಕ್ಕೆ ರೆಡಿಯಾದ ತಂಡ ಇದೀಗ ಒಂದು ಹಂತದ ಕಥೆ ರೆಡಿ ಮಾಡಿ, ಶೂಟಿಂಗ್ ಗೆ ಸಿದ್ದತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂತಾರ ಪಾರ್ಟ್ 2 ಅಲ್ಲ.. ಮುಂದೆ ಬರುವುದು ಪಾರ್ಟ್ 1 ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದ ನಿರ್ದೇಶಕ ರಿಷಬ್, ಮತ್ತೊಂದು ಕಾಡಿನ ಕಥೆ ಹೇಳೋಕೆ ಸಿದ್ದರಾಗಿದ್ರು. ದೈವದ ಹುಟ್ಟಿನ ಕಥೆ ಹೇಳಲು ಹೊರಟ ರಿಷಬ್ ದಟ್ಟಡವಿಯ ಸುತ್ತ ಕಿವಿಗೊಟ್ಟಿದ್ದರು. ಕಾಡಿನ ಕಥೆಯನ್ನು ದೃಶ್ಯ ಕ್ಕೆ ಸೇರಿಸೋ ಕಸರತ್ತು ನಡೆಸಿದ್ದರು.. ಕಾಂತಾರ ಬಳಿಕ ಮುಂದುವರೆದ ಕಥೆ ಹೆಣೆಯಲು ಸಜ್ಜಾಗಿದ್ದ ರಿಷಬ್ ಕಥೆಗೆ ಇದೀಗ ಒಂದು ರೂಪ ಬಂದಿದೆಯಂತೆ.

ಹೌದು, ಕಾಂತಾರ ಮುಂದುವರೆದ ಭಾಗದ ಪ್ರೀಕ್ವೆಲ್, ಸ್ಕ್ರಿಪ್ಟ್ ನ ಮೊದಲ ಡ್ರಾಫ್ಟ್ ಫೈನಲ್ ಆಗಿದೆಯಂತೆ. ಅಷ್ಟೇ ಅಲ್ಲ, ಮೊದಲ ಡ್ರಾಫ್ಟ್ ಕಥೆಯ ಬಗ್ಗೆ ರಿಷಬ್ ಶೆಟ್ಟಿ ಹಾಗೂ ಅವರ ತಂಡಕ್ಕೆ ತೃಪ್ತಿ ಸಿಕ್ಕಿದ್ಯಂತೆ. ಇನ್ನಷ್ಟು ಕಥೆಯ ಡಿಸ್ಕಷನ್ ನಡೆದ ಬಳಿಕ ಎಲ್ಲಾದರೂ ಬದಲಾವಣೆ ಅಗತ್ಯವಿದೆ ಎನಿಸಿದರೆ ಮತ್ತೆ ಸ್ಕ್ರಿಪ್ಟ್ ಬದಲಾಗುವ ಸಾಧ್ಯತೆ ಇದೆಯಂತೆ.

ಮಳೆಗಾಲದಲ್ಲಿಯೇ ಶೂಟಿಂಗ್.. ?

ಕಾಂತಾರ ಸಿನಿಮಾದಲ್ಲಿನ ಹಿಂದಿನ ಕಥೆಯನ್ನು ಹೇಳಲು ತಂಡ ಸಿದ್ದತೆ ನಡೆಸಿದೆ. ಕಥೆಗೆ ಮಳೆಯ ದೃಶ್ಯ ಅಗತ್ಯ ಇರುವುದರಿಂದ ಮಳೆಗಾಲದಲ್ಲೇ ಶೂಟಿಂಗ್ ನಡೆಯಲಿದೆಯಂತೆ. ಅಲ್ಲದೇ ಶೂಟಿಂಗ್‌ಗೆ ಸೂಟ್ ಆಗೋ ಸ್ಥಳ ಹುಡುಕಾಟದಲ್ಲಿಯೂ ಚಿತ್ರ ತಂಡ ಇದೆಯಂತೆ. ಇನ್ನೂ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕುತೂಹಲ ವಂತೂ ಸಹಜವಾಗೇ ಇದೆ. ಆ ಬಗ್ಗೆ ಕಾಂತಾರ ತಂಡದಿಂದ ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸಧ್ಯ ಎಲ್ಲರ ಚಿತ್ತ ಕಾಂತಾರ ಮುಂದುವರೆದ ಸ್ಕ್ರಿಪ್ಟ್ ನತ್ತ ನೆಟ್ಟಿದೆ.

More News

You cannot copy content of this page