ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ’ಲಾಲ್ ಸಲಾಂ’ ಪೋಸ್ಟರ್ ಬಿಡುಗಡೆಯಾಗಿದೆ. ವಿಶೇಷವೆಂದರೆ ತಮ್ಮ ಮಗಳು ಐಶ್ವರ್ಯ ನಿರ್ದೇಶನದ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಕೈಜೋಡಿಸುತ್ತಿದ್ದಾರೆ. ಸದ್ಯ ಈ ಚಿತ್ರದ ತಲೈವಾ ನ್ಯೂ ಲುಕ್ ರಿವೀಲ್ ಆಗಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ.
ಸದ್ಯ ‘ಜೈಲರ್’ನಲ್ಲಿ ಹೀರೋ ಆಗಿ ತಲೈವಾ ನಟಿಸುತ್ತಿದ್ದಾರೆ. ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ‘ಲಾಲ್ ಸಲಾಂ’ ಸಿನಿಮಾಕ್ಕೆ ಐಶ್ವರ್ಯ ರಜಿನಿಕಾಂತ್ ನಿರ್ದೇಶನವಿದೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ಜೀವತುಂಬಿದ್ದಾರೆ.

ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಈ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಸದ್ಯ ಸಿನಿಮಾದ ಪೋಸ್ಟರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಕಾಣಿಸಿಕೊಂಡು ಜನಮನ ಗೆದ್ದಿದ್ದರು. ಅದೇ ರೀತಿಯ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್ ನೆನಪಿಸುತ್ತಿದೆ. ‘ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ- ಎಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ.
ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ದಾಂಪತ್ಯ ಜೀವನದಲ್ಲಿ ಸೋತಿರೋ ಐಶ್ವರ್ಯಗೆ ಈ ಸಿನಿಮಾದಿಂದ ಬಿಗ್ ಬ್ರೇಕ್ ಸಿಗಲಿದೆಯಾ ನೋಡಬೇಕು. ಇನ್ನು ರಜನಿಕಾಂತ್ ಈ ಚಿತ್ರದಲ್ಲಿ ನಟಿಸುತ್ತಿರುವ ಕಾರಣ, ಚಿತ್ರದ ಮೇಲಿನ ನಿರೀಕ್ಷೆ ಸಹ ಹೆಚ್ಚಾಗಿದೆ.