ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ 8 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಿನ್ನೆ ಅಷ್ಟೇ ಸಿಎಂ ಸಿದ್ದರಾಮಯ್ಯ ಒಂದು ಪಟ್ಟಿ, ಡಿಸಿಎಂ ಡಿಕೆ ಶಿವಕುಮಾರ್ ಒಂದು ಪಟ್ಟಿ ಸಿದ್ದಪಡಿಸಿ ದೆಹಲಿಗೆ ತೆರಳಿ ಹೈಕಮಾಂಡ್ ನೊಂದಿಗೆ ತಡರಾತ್ರಿ ವರೆಗೂ ಚರ್ಚೆ ನಡೆಸಲಾಯಿತು. ತಡರಾತ್ರಿ ವರೆಗೂ ಸಭೆ ನಡೆದರೂ ಸಹ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ 8 ಜನರ ಪಟ್ಟಿ ಸಿದ್ದಪಡಿಸಿ ದೆಹಲಿಯಿಂದ ವಾಪಸ್ ಆದರು. ಯಾರನ್ನು ಕ್ಯಾಬಿನೆಟ್ ನಿಂದ ಬಿಡದಿದ್ರೆ ಉತ್ತಮ..? ಎಂದು ಚರ್ಚೆ ನಡೆಸಿ ಅತಿ ಮುಖ್ಯವಾದ 8 ಮಂದಿಗೆ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ಮಾಡಿಕೊಡಲಾಯ್ತು.

ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನೂತನ ಸಚಿವರು
ಎಂ.ಬಿ. ಪಾಟೀಲ್
ಡಾ.ಜಿ. ಪರಮೇಶ್ವರ
ಕೆ.ಎಚ್.ಮುನಿಯಪ್ಪ
ಕೆ.ಜೆ. ಜಾರ್ಜ್
ಸತೀಶ್ ಜಾರಕಿಹೊಳಿ
ಪ್ರಿಯಾಂಕ್ ಖರ್ಗೆ
ಜಮೀರ್ ಅಹಮದ್ ಖಾನ್
ರಾಮಲಿಂಗಾರೆಡ್ಡಿ
ಇನ್ನು ಇಂದು ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ಹಿನ್ನಲೆ ದೇಶದ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಪಶ್ಚಿಮ ಬಂಗಾಳ ಸಿಎಂ – ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್- ಬಿಹಾರ ಸಿಎಂ
ಹೇಮಂತ್ ಸೊರೇನ್- ಜಾರ್ಖಂಡ್ ಸಿಎಂ, ತೇಜಸ್ವಿ ಯಾದವ್- ಬಿಹಾರ ಡಿಸಿಎಂ, ಶರದ್ ಪವಾರ್- ಎನ್ ಸಿಪಿ ಮುಖ್ಯಸ್ಥ, ಉದ್ದವ್ ಠಾಕ್ರೆ- ಮಹಾರಾಷ್ಟ್ರ ಮಾಜಿ ಸಿಎಂ
ಅಖಿಲೇಶ್ ಯಾದವ್-ಯುಪಿ ಮಾಜಿ ಸಿಎಂ, ಫಾರೂಕ್ ಅಬ್ದುಲ್ಲಾ- ಜಮ್ಮು ಕಾಶ್ಮೀರ ಮಾಜಿ ಸಿಎಂ, ಮೆಹಬೂಬ ಮುಕ್ತಿ- ಜಮ್ಮು ಕಾಶ್ಮೀರ ಮಾಜಿ ಸಿಎಂ, ಸೀತಾರಾಂ ಯೆಚೂರಿ- ಸಿಪಿಎಂ ನಾಯಕ, ಡಿ.ರಾಜಾ- ಸಿಪಿಐ ನಾಯಕ
ಲಲನ್ ಸಿಂಗ್- ಜೆಡಿಯು ನಾಯಕ, ವೈಕೋ- ತಮಿಳುನಾಡು ಎಂಡಿಎಂಕೆ ಪಾರ್ಟಿ, ಎಂ.ಕೆ.ಪ್ರೇಮಚಂದ್ರನ್- ಆರ್ ಎಸ್ ಪಿ ಪಾರ್ಟಿ, ದೀಪಾಂಕರ್ ಭಟ್ಟಾಚಾರ್ಯ- ಸಿಪಿಐಎಂ, ತಿರುಮಾವಲನ್- ವಿಸಿಕೆ ಪಾರ್ಟಿ, ಜಯಂತ್ ಚೌದರಿ- ಆರ್ ಎಲ್ ಡಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.