Rahul Gandhi: ನುಡಿದಂತೆ ನಡೆಯುತ್ತೇವೆ: ರಾಹುಲ್ ಗಾಂಧಿ ಅಭಯ

ಬೆಂಗಳೂರು: ಕಾಂಗ್ರೆಸ್ ಪಕ್ಷ ದ್ವೇಷ ಅಳಿಸಿ ಪ್ರೀತಿಯನ್ನು ಅರಳಿಸಲಿದೆ. ನಮ್ಮ ಸರ್ಕಾರ ಏಳು ಕೋಟಿ ಜನತೆಯ ಸರ್ಕಾರ. ನಾವು ನುಡಿದಂತೆ ನಡೆಯುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದ ಸಮಾರೋಪದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ ರಾಜ್ಯದ ಜನತೆಗೆ ಧನ್ಯವಾದ ಹೇಳಿದರು.

ನಾವು ಮುಖ್ಯವಾಗಿ ಐದು ಯೋಜನೆಗಳನ್ನು ಘೋಷಿಸಿದ್ದೆವು. ಇಂದು ನಡೆಯುವ ಸಂಪುಟ ಸಭೆಯಲ್ಲಿ ಕೊಟ್ಟ ಭರವಸೆಗಳು ಕಾನೂನಾಗಿ ಜಾರಿಗೆ ಬರಲಿವೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ- ೨೦೦ ಯೂನಿಟ್ ವಿದ್ಯುತ್ ಉಚಿತ, ಪ್ರತಿ ಕುಟುಂಬಕ್ಕೆ ಹತ್ತು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ, ರಾಜ್ಯದ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಪದವೀಧರರಿಗೆ ೩ ಸಾವಿರ ರೂ., ಡಿಪ್ಲೊಮಾ ಮಾಡಿದವರಿಗೆ ೧೫೦೦ ರೂ. ನೀಡುವ ‘ಯುವನಿಧಿ’ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ ಎಂದು ಭರವಸೆ ನೀಡಿದರು.


ಕೊಟ್ಟ ಮಾತಿನಂತೆ ನಾವು‌ ನಡೆಯುತ್ತೇವೆ. ಕರ್ನಾಟಕದಲ್ಲಿ ಪೂರ್ಣ ಬದಲಾವಣೆ ಬಯಸಿದ್ದೀರ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಯುತ್ತದೆ. ನಮಗೆ ದಲಿತರು, ಬಡವರು, ರೈತರು, ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರೂ ಬೆಂಬಲ ನೀಡಿದ್ದೀರಿ. ಬಿಜೆಪಿಯ ಉಳ್ಳವರ ಕುತಂತ್ರಗಳನ್ನು ಹಿಮ್ಮೆಟ್ಟುವುದರ ಮೂಲಕ ಭ್ರಷ್ಟಾಚಾರ ವನ್ನು ತಿರಸ್ಕಾರ ಮಾಡಿದ್ದೀರ. ನಿಮ್ಮ ನಂಬಿಕೆಗೆ ತಕ್ಕಂತೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು ಎಂದರು.
ನಾವು ನುಡಿದಂತೆ ನಡೆದವರು. ಕಿರಾಣಿ ಅಂಗಡಿ, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರ ರಕ್ಷಣೆ ನಮ್ಮ ಕರ್ತವ್ಯ. ನಮ್ಮ ಸರ್ಕಾರ ಉತ್ತಮ ಆಡಳಿತ ನೀಡಲಿದೆ. ನಿಮ್ಮೆಲ್ಲರ ಪ್ರೀತಿಗೆ ನಾವು ಚಿರ ಋಣಿ. ನಮ್ಮದು ನಿಮ್ಮೆಲ್ಲರ ಸರ್ಕಾರ ನಿಮಗಾಗಿ ನಮ್ಮ ಸರ್ಕಾರ ದುಡಿಯಲಿದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾವು  ಬಿಜೆಪಿಯವರಂತೆ ಹೇಳುವುದು ಒಂದು ಮಾಡುವುದೊಂದು ಮಾಡೊದಿಲ್ಲ ಎಂದು ಕಾಳೆಲೆದರು.


ದೇಶದ ಪ್ರಧಾನಿ ಮೋದಿ ಅವರು ವಿದೇಶಕ್ಕೆ( ಜಪಾನ್) ಹೋದ ಸಂದರ್ಭದಲ್ಲೇ  ನೋಟ್ ಬ್ಯಾನ್ ಮಾಡುತ್ತಾರೆ. ಈ ಹಿಂದೆಯೂ ಜಪಾನ್ ಗೆ ತೆರಳಿದಾಗ ನೋಟು ಅಮಾನ್ಯೀಕರಣ ಮಾಡಲಾಗಿತ್ತು.  ಈ ನೋಟ್ ಬ್ಯಾನ್ ಕಾರ್ಯವನ್ನು ಹಿಂದೆ ಮಾಡಿದಂತೆ ಇಂದೂ ಸಹ ಮಾಡುತ್ತಿದ್ದಾರೆ. ಈ ಮೂಲಕ ದೇಶದ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು.
ರಾಜ್ಯದ ಮೊದಲ ಸಂಪುಟ ಸಭೆಯಲ್ಲೇ ನಾವು ನುಡಿದಂತೆ ನಡೆಯುತ್ತೇವೆ. ನಾವು ಜನತೆಗೆ ನೀಡಿರುವ ಐದು ಭರವಸೆಗಳನ್ನು ಜಾರಿಗೆ ತರುತ್ತೇವೆ. ರಾಜ್ಯದಲ್ಲಿರುವುದು ನಿಮ್ಮೆಲ್ಲರ ಪ್ರೀತಿಯ ಸರ್ಕಾರ ಎಂದು ಹೇಳಿದರು.

More News

You cannot copy content of this page