ಈ ವಯಸ್ಸಿನಲ್ಲಿ ಮದುವೆ ಆದರೆ ತಪ್ಪೇನು? ನಾನು ಒಂಟಿಯಾಗಿ, ನೆಮ್ಮದಿಯಿಲ್ಲದೇ ಸಾಯಬೇಕಿತ್ತಾ? ಎಂದು ನಟ ಆಶಿಶ್ ವಿದ್ಯಾರ್ಥಿ ಪ್ರಶ್ನೆ ಹಾಕಿದ್ದಾರೆ.
ಇತ್ತೀಚೆಗೆ ಅಷ್ಟೇ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿಗೆ ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ನಟ, ಪ್ರೀತಿಗೆ ವಯಸ್ಸಿನ ಹಂಗು ಯಾಕೆ ಎಂದು ಪ್ರಶ್ನೆ ಹಾಕಿದ್ದರು. ನಟ ಆಶಿಶ್ ತಮ್ಮ ವಿವಾಹ ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಬೆನ್ನಲ್ಲೇ ಸಾಕಷ್ಟು ಪರ ವಿರೋದ ಚರ್ಚೆಯಾದವು. ಇದರಿಂದ ನೊಂದ ನಟ ಆಶಿಶ್ ಮದ್ವೆ ಆದ್ರೆ ತಪ್ಪೇನು ಎಂದು ಪ್ರಶ್ನೆ ಹಾಕಿದ್ದಾರೆ.

ನಟ ಆಶಿಶ್ ಕೆಲ ಹೊಂದಾಣಿಕೆ ಸಮಸ್ಯೆ ಯಿಂದ ತಮ್ಮ ಮೊದಲ ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡಿದ್ದರು. ಸಾಕಷ್ಟು ವರ್ಷಗಳ ಕಾಲ ಒಬ್ಬರೇ ಇದ್ದ ಆಶಿಶ್ ಇತ್ತೀಚೆಗೆ ಅಷ್ಟೇ ರೂಪಾಲಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ನಟನ ವಿವಾಹದ ಕುರಿತು ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ವಯಸ್ಸಿನಲ್ಲಿ ಎಂಥ ಮದ್ವೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಲಾಯ್ತು. ಇದರಿಂದ ನೊಂದ ನಟ ಆಶಿಶ್, ಯಾಕೆ ಮದ್ವೆ ಆಗ್ಬಾರ್ದು ಎಂದು ಪ್ರಶ್ನೆ ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮದ್ವೆ ಈಗ ಬೇಕಾ ಎಂಬ ಟೀಕೆಗೆ ಉತ್ತರಿಸಿದ ನಟ, ಈ ವಯಸ್ಸಿನಲ್ಲಿ ಮದುವೆ ಆದರೆ ತಪ್ಪೇನು? ನಾನು ಒಂಟಿಯಾಗಿ, ನೆಮ್ಮದಿಯಿಲ್ಲದೇ ಸಾಯಬೇಕಿತ್ತಾ? ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಮದುವೆ ಅನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಮನಸ್ಸಿಗೆ ಸಂಬಂಧಿಸಿದ್ದು ಎಂದು ನಟ ಬರೆದುಕೊಂಡಿದ್ದಾರೆ.
#ASHISHVIDYARTHI #RUPALI #MARRIAGE #60YEAR #SINGLE