ಮುಂಬೈ : ಕಳೆದ ಮೂರು ವರ್ಷಗಳಿಂದ ತನ್ನ ಜತೆಯಲ್ಲಿಯೇ ಸಹಜೀವನ ನಡೆಸುತ್ತಿದ್ದ ಸಂಗಾತಿಯನ್ನು ಕೊಂದು, ಆಕೆಯ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿರುವ ಪ್ರಕರಣ ಮಹಾರಾಷ್ಟ್ರದ ಥಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
56 ವರ್ಷದ ಮನೋಜ್ ಸಹಾನಿ ಬಂಧನಕ್ಕೊಳ್ಳಗಾಗಿದ್ದು, ಸರಸ್ವತಿ ವೈದ್ಯ (32) ವರ್ಷ ಮಹಿಳೆಯನ್ನು ಕೊಂದು ಯಾರಿಗೂ ತಿಳಿಯಬಾರದು ಎಂಬ ಉದ್ದೇಶದಿಂದ ದೇಹದ ಭಾಗಗಳನ್ನು ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಿ ಕಟ್ಟರ್ ನಿಂದ ಮಹಿಳೆಯ ದೇಹವನ್ನು ಮೂರು ಅಥವಾ ನಾಲ್ಕು ದಿನಗಳ ಹಿಂದೆ ಕತ್ತರಿಸಿ, ಹತ್ತಕ್ಕೂ ಹೆಚ್ಚು ಪೀಸ್ ಗಳನ್ನು ಮಾಡಿದ್ದ. ನಂತರ ಮೃತದೇಹದ ಭಾಗಗಳನ್ನು ಹೊರಗೆ ಎಸೆಯುವ ಉದ್ದೇಶದಿಂದ ಕುಕ್ಕರ್ ನಲ್ಲಿ ಬೇಯಿಸಿ, ಪೇಪರ್ ಕವರ್ ನಲ್ಲಿ ಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫ್ಲ್ಯಾಟ್ ನಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪತ್ತೆ ಹಚ್ಚಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.