ಲೈಂಗಿಕ ದೌರ್ಜನ್ಯಕ್ಕೆ ನಾನೂ ಒಳಗಾದವನೇ ಎಂದು ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ನಿರ್ದೇಶಕನ ಪೋಸ್ಟ್ ಸಧ್ಯ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
“ಬರ್ತೀಯಾ” ಎಂದು ಕೇಳಿದರೆ ಅದು ಸೆಕ್ಷ್ಯುವಲ್ ಹರಾಸ್ಮೆಂಟ್ ಎಂಬ ಸುಪ್ರೀಂ ತೀರ್ಪಿನ ಕುರಿತು ಬರೆದುಕೊಂಡಿರುವ ಅವರು, ನಾನೂ ಲೈಂಗಿಕ ದೌರ್ಜನ್ಯ ಕ್ಕೆ ಒಳಗಾಗಿದ್ದೇನೆ ಎಂದು ಬರೆಯುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.
ಸಿನಿಮಾ ಇಂಡಸ್ಟ್ರಿ ಯಲ್ಲಿ ಕಾಸ್ಡಿಂಗ್ ಕೌಚ್ ಬಗ್ಗೆ ನಾವು ಆಗಾಗ ಕೇಳುತ್ತಿರುತ್ತೇವೆ. ಆದ್ರೆ ನಿರ್ದೇಶ ಕವಿರಾಜ್ ಇಲ್ಲಿ ಬರೆದ ತಮ್ಮ ಅನುಭವ ಸಿನಿಮಾ ಇಂಡಸ್ಟ್ರಿ ಹೊರತಾಗಿ ನಡೆದ ಘಟನೆ. ಕವಿರಾಜ್ ತಮ್ಮ ಹಳ್ಳಿಯಿಂದ ಕೆಂಪು ಬಸ್ ಹತ್ತಿ ಬಂದ ಹೊಸ್ರಲ್ಲಿ ಮೆಜೆಸ್ಟಿಕ್ ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲವಂತೆ. ರಾಜಾಜಿನಗರದಿಂದ ಬಸ್ ಹತ್ತಿ ಮೆಜೆಸ್ಟಿಕ್ ಹೋಗೋದು. ಅದೇ ಪ್ಲಾಟ್ ಫಾರ್ಮ್ ಅಲ್ಲಿ ಸ್ವಲ್ಪ ಹೊತ್ತು ಕುಳಿತು ಮತ್ತೆ ರಾಜಾಜಿನಗರ ಬಸ್ ಹತ್ತಿ ವಾಪಾಸು ಆಗೋ ಮೂಲಕ ಟೈಂ ಪಾಸ್ ಮಾಡ್ತಿದ್ರಂತೆ. ಇದೇ ರೀತಿ ಒಂದು ದಿನ ಕುಳಿತಿದ್ದಾಗ ಎದುರು ಪ್ಲಾಟ್ ನಲ್ಲಿ ಕುಳಿತ ಮಹಿಳೆ ಕವಿರಾಜ್ ರನ್ನು ಗುರಾಯಿಸಿದ್ದಳಂತೆ. ಕವಿರಾಜ್ ಆ ಹೆಣ್ಣಿನ ನೋಟಕ್ಕೆ ವಿಚಲಿತರಾದರೂ ಕೂತಲ್ಲಿಯೇ ಕುಳಿತಿದ್ದರಂತೆ. ಹೀಗಾಗಿ ಸ್ವಲ್ಪ ಹೊತ್ತಿನವರೆಗೂ ನೋಡಿ. ಬಳಿಕ ಆ ಹೆಂಗಸೇ ಕವಿರಾಜ್ ಬಳಿಗೆ ಬಂದು ಮೆಲುದನಿಯಲ್ಲಿ ‘ಬರ್ತಿಯಾ?’ ಎಂದಳು. ನಾನು ಅಮಾಯಕವಾಗಿ ಉಗುಳು ನುಂಗಿ ‘ಎಲ್ಲಿಗೆ?’ ಎಂದೆ. ಹೆಂಗಸು ಕೋಪದಿಂದ ನನ್ನನ್ನೇ ದಿಟ್ಟಿಸಿ ‘ಥೂ’ ಎಂದು ಉಗಿದು ಹೊರಟೇ ಬಿಟ್ಟಳು. ನನಗೆ ಒಂಥರಾ ಅವಮಾನವಾಯಿತು ಎಂದು ಬರೆದುಕೊಂಡಿದ್ದಾರೆ.
ಆ ಹೆಂಗಸು ‘ಬರ್ತಿಯಾ? ಎಂದು ನನ್ನನ್ನು ಕರೆದದ್ದು ಯಾಕೆ? ‘ಎಲ್ಲಿಗೆ’ ಎಂದು ಕೇಳಿದ ನನ್ನದೇನು ತಪ್ಪು? ಅಷ್ಟಕ್ಕೆ ಅದ್ಯಾಕೇ ‘ಥೂ’ ಎಂದುಬಿಟ್ಟಳು? ಎಂಬ ಪ್ರಶ್ನೆಗಳು ನನ್ನನ್ನು ಸದಾ ಕಾಡುತ್ತಲೇ ಇತ್ತು. ಸುಪ್ರೀಂ ಕೋರ್ಟ್ ನ ತೀರ್ಪು ಓದಿದ ಬಳಿಕ ನಾನೂ ಲೈಂಗಿಕ ದೌರ್ಜನ್ಯ ಕ್ಕೆ ಒಳಗಾದವನೇ ಎಂಬುದು ಅರಿವಿಗೆ ಬಂತು ಎಂದು ಬರೆದುಕೊಂಡಿದ್ದು, ಬರ್ತೀಯಾ ಎಂಬ ಪದ ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.