KODI MATT SWAMIJI BHAVISHYA: ದೇಶಕ್ಕೆ ಇನ್ನೂ ಒಂದು ಭಾರೀ ಗಂಡಾಂತರ ಕಾದಿದೆ: ಕೋಡಿ ಮಠದ ಸ್ವಾಮೀಜಿ ಭವಿಷ್ಯ

ಕೋಲಾರ : ಈ ವರ್ಷದಲ್ಲಿ ಇನ್ನೂ ಒಂದು ಭಾರೀ ಗಂಡಾಂತರ ದೇಶಕ್ಕೆ ಕಾದಿದೆ, ಈ ವರ್ಷ ಅಚನಕ್ಕಾಗಿ ಗುಡುಗು ಮಿಂಚು ಬರಲಿದ್ದು, ಎರಡು ಅಥವಾ ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗಲಿವೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿ ಮಠದ ಸ್ವಾಮೀಜಿ ಶ್ರೀ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿ, ಎಲ್ಲೋ ನಡೆದ ಬಾಂಬ್ ದಾಳಿಯಿಂದ ಭಾರತ ದೇಶಕ್ಕೆ ಭಾರೀ ಅನಾಹುತ ಸಂಭವಿಸಲಿದೆ ಎಂದು ತಿಳಿಸಿದರು.
ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ ಎಂದು ತಿಳಿಸಿದರು.

ಗಿಡ, ಮರ, ಬಳಿ ದೈವದ, ಆರಾಧ್ಯದ ಸಂಕೇತ, ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ ಎಂದು ತಿಳಿಸಿದ ಸ್ವಾಮೀಜಿ, ಅಂತಹ ಸೂಚನೆ ಈಗಾಗಲೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಆದ್ಯಾತ್ಮಿಕವಾಗಿ ಅವರು ನಡೆಯುತ್ತಿದ್ದಾರೆ ಹಾಗಾಗಿ ಅವರಿಗೆ ಒಳ್ಳೆಯದಾಗಲಿ‌, ಆದ್ಯಾತ್ಮ ಬಿಟ್ಟು ಹೋದ್ರೆ ಅವರಿಗೆ ದೈವವೆ ಉತ್ತರ ನೀಡಲಿದೆ ಎಂದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶುಭ ಸೂಚನೆ ನೀಡಿದ ಕೋಡಿ ಮಠದ ಸ್ವಾಮೀಜಿ, ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

More News

You cannot copy content of this page