SRIRAMULU WARNS GOVERNMENT: ಪ್ರಾಣ ಕೊಡ್ತೀವಿ ಆದರೆ ಮೀಸಲಾತಿ ಮುಟ್ಟಿದ್ರೆ ಸಹಿಸೋದಿಲ್ಲ: ಶ್ರೀರಾಮುಲು ಎಚ್ಚರಿಕೆ

ಬೆಂಗಳೂರು : ಜಾತಿ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿರ್ಣಯ ಬದಲಾವಣೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಾಣ ಕೊಡ್ತೀವಿ ಆದರೆ ಮೀಸಲಾತಿ ಮುಟ್ಟಿದ್ರೆ ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
“ಮೀಸಲಾತಿ ಮುಟ್ಟಿದ್ರೆ ಜನರು ಮುಂದೆ ಬೀದಿಗಿಳಿಯುತ್ತಾರೆ” ಎಂದು ಹೇಳಿದರು. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಜಾತಿ ಜನಗಣತಿ ಬಹಳ ಹಳೆಯದ್ದು. ಅವ್ರು ಸಿಎಂ ಆಗಿದ್ದಾಗಲೇ ಇದನ್ನು ಸ್ವೀಕಾರ ಮಾಡಲು ಒಪ್ಪಿರಲಿಲ್ಲ. ಅವರೇ ಸಿಎಂ ಆಗಿದ್ರು, ಅವರೇ ಯಾರನ್ನೋ ಚೇರ್ ಮ್ಯಾನ್ ಕೂಡ ಮಾಡಿಕೊಂಡಿದ್ರು. ಅವರು ಕೊಟ್ಟ ವರದಿಯನ್ನೇ ಸ್ವೀಕಾರ ಮಾಡೋಕೆ ರೆಡಿ ಇರಲಿಲ್ಲ ಎಂದು ಹೇಳಿದರು.
ಇವತ್ತು ಜಾತಿ ಜನಗಣತಿ ಬಗ್ಗೆ ಮಾತಾಡಿದ್ರೆ ಎಲ್ಲಿಗೆ ಹೋಗಿ ನಿಲ್ಲುತ್ತದೆ..? ಅಧಿಕಾರದಲ್ಲಿ ಇರುವಾಗ ಒಂದು ಮಾತು, ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು ಮಾತು. ಮೀಸಲಾತಿ ಮುಟ್ಟಿದ್ರೆ ಜನರು ಮುಂದೆ ಬೀದಿಗಿಳಿಯುತ್ತಾರೆ. ಶಾಸಕರ ಮನೆಗಳಿಗೆ ನುಗ್ಗುವಂತ ಕೆಲಸ ಕೂಡ ಆಗುತ್ತದೆ. ಎಂತಹ ಪರಿಸ್ಥಿತಿ ಆದರೂ ಸರಿಯೇ.. ಜೀವ, ಪ್ರಾಣ ಬೇಕಿದ್ರೆ ಕೊಡ್ತೀವಿ. ಆದರೆ ಮೀಸಲಾತಿ ಮುಟ್ಟೋರನ್ನು, ತೆಗೆಯೋರನ್ನಂತೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮುಂದುವರೆದು ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿ ಕಾಂಗ್ರೆಸ್ ಗೆ ಕಷ್ಟ ಆಗ್ತಿದೆ. ಸರ್ಕಾರದ ಖಜಾನೆ ಖಾಲಿ ಆಗ್ತಿದೆ.‌ ಉಚಿತ ಕರೆಂಟ್ ಸಿಗುತ್ತೆ ಅಂತ ನಂಬಿದ ಬಡವರಿಗೆ ಮೋಸ ಮಾಡಿದ್ದಾರೆ. ಕರೆಂಟ್ ದರ ಇನ್ನಷ್ಟು ಹೆಚ್ಚಿಗೆ ಮಾಡಿದ್ದಾರೆ. ಇದನ್ನೆಲ್ಲ ಜನ ಗಮನಿಸ್ತಿದ್ದಾರೆ ಎಂದರು.
ಗ್ಯಾರಂಟಿಗಳಲ್ಲಿ ಷರತ್ತುಗಳನ್ನು ಹಾಕಿದಾರೆ. ನೌಕರರಿಗೆ ವೇತನ ಕೊಡೋಕೆ ಸಮಸ್ಯೆ ಆಗಬಹುದು ಎಂದಿದ್ದಾರೆ. ಅಧಿಕಾರಕ್ಕೆ ಮುಂಚಿತವಾಗಿ ಅವ್ರು ನನಗೂ ಫ್ರೀ ನಿಮಗೂ ಫ್ರೀ ಎಂದು ಜನರಿಗೆ ಯಾಮಾರಿಸಿ ಅಧಿಕಾರಕ್ಕೆ ಬಂದಿದ್ದಾರೆ.‌ ಅವರ ಮಾತು ನೋಡಿದ್ರೆ ಖಂಡಿತ ಗ್ಯಾರಂಟಿ ಗಳು ಅನುಷ್ಠಾನ ಮಾಡೋದು ಕಾಣ್ತಿಲ್ಲ. ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸ್ತಾರೆ ಎಂದು ಶ್ರೀರಾಮುಲು ದೂರಿದರು.

More News

You cannot copy content of this page