ಹಾವೇರಿ: ನಿನ್ನೆ ನಡೆದಿದ ಘಟನೆಯನ್ನ ಮರೆಯುವ ಕಾಲದಲ್ಲಿ. ಇಲ್ಲೊಂದು ಪುಟ್ಟ ಪುಟಾಣಿ ಪ್ರತಿಭೆ ದೇಶದ ಪ್ರಧಾನಿಗಳು, ರಾಜ್ಯಗಳ ಸಿಎಂ, ರಾಜ್ಯಗಳ ರಾಜಧಾನಿ, ನದಿಗಳ ಹೆಸರು ಸೇರಿದಂತೆ ಯಾವುದೇ ಪ್ರಶ್ನೆ ಕೇಳಿದರೂ ಥಟ್ಟನೆ ಉತ್ತರಿಸುವ ಮೂಲಕ ಎಂತಹವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತಿದ್ದಾಳೆ.
ಹೌದು, ಈ ಬಾಲಕಿ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಜಾಣ ವಿದ್ಯಾರ್ಥಿನಿ ವರ್ಷಾ. ಹಿರೇಕೆರೂರ ಪಟ್ಟಣದ ಸರ್ಕಾರಿ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ಬಾಲ ಪ್ರತಿಭೆಯಾಗಿದೆ. ಈ ಪುಟಾಣಿಯ ತಂದೆ ಈರಣ್ಣ, ತಾಯಿ ಅಕ್ಷತಾ ಅವರ ಪ್ರೀತಿಯ ಪುತ್ರಿ ವರ್ಷಾ ಆಗಿದ್ದಾಳೆ. ಇನ್ನು ಈ ದಂಪತಿಗಳು ಕಡುಬಡವರಾಗಿದ್ದು, ಪಟ್ಟಣದ ದುರ್ಗಾದೇವಿ ದೇವಸ್ಥಾನದ ಬಳಿ ಹೂವು, ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಇಷ್ಟು ಬಡತನವಿದ್ದರು ಈ ಪೋಷಕರು, ಬಾಲಕಿಯ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತ ಸಾಥ್ ನೀಡುತ್ತಿದ್ದಾರೆ. ಈ ಹಿನ್ನಲೆ ಈ ಪುಟ್ಟಾಣಿ ಶಾಲೆಯಲ್ಲಿ ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ಬಾಲಕಿ ವರ್ಷಾ ಮುಂದಿದ್ದಾಳೆ. ಇನ್ನು ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರತ್ನ, ಭಾತರ ರಕ್ಷ ಪ್ರಶಸ್ತಿ ಪುರಸ್ಕೃತರು, ದೇಶದಲ್ಲಿರುವ ರಾಜ್ಯಗಳು, ಜಿಲ್ಲೆಗಳು, ತಾಲೂಕುಗಳು, ರಾಜಧಾನಿಗಳು, ನದಿಗಳು, ಈವರೆಗಿನ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ರಾಜ್ಯದಲ್ಲಿ ಆಡಳಿತ ನಡೆಸಿದ ಕುರಿತು ಈ ಬಾಲಕಿ ಥಟ ಅಂತಾ ಉತ್ತರಿಸುತ್ತಾಳೆ. ಪಠ್ಯ & ಪತ್ಯೇತರ ಯಾವ ಚಟುವಟಿಕೆ, ಸ್ಪರ್ಧೆ, ಪರೀಕ್ಷೆ ನೀಡಿದರೂ ತಕ್ಷಣ ಉತ್ತರಿಸುತ್ತಾಳೆ. ಇನ್ನು 1 ರಿಂದ 30 ರ ವರೆಗೆ ಮಗ್ಗಿ ಕಲಿತಿದ್ದು, ಗಣಿತದಲ್ಲೂ ಈ ಪುಟ್ಟ ಬಾಲಕಿ ಜಾಣಿ ಎನಿಸಿಕೊಳ್ಳುವ ಮೂಲಕ ಈಗ ಎಲ್ಲ ಗಮನ ಸೆಳೆಯುತ್ತಿದ್ದಾಳೆ…