Roopesh Shetty: ನನ್ನನ್ಯಾರೂ ಲವ್ ಮಾಡೊಲ್ಲ: ರೂಪೇಶ್ ಶೆಟ್ಟಿ

ಬಿಗ್ ಬಾಸ್ ಮನೆಯ ಜನ ಮನ ಗೆದ್ದ ಬಳಿಕ ರೂಪೇಶ್ ಏನ್ ಮಾಡ್ತಿದ್ದಾರೆ.. ಲವ್ ಗಿವ್ ಆಗಿ ಬ್ಯುಸಿ ಆಗ್ಬಿಟ್ಟಿದ್ದಾರಾ..? ಅಥವಾ ಕಾಂತಾರ ಪಾರ್ಟ್ 2 ನಲ್ಲಿ ಕಾಣಿಸ್ಕೊಳ್ತಾರಾ ಎಂದೆಲ್ಲಾ ರೂಪೇಶ್ ಅಭಿಮಾನಿಗಳು ಕಾದು ಕುಳಿತಿದ್ದಾರೆ.. ಏನ್ ನಿಮ್ಗೆ ಲವ್ ಆಗಿದ್ಯಂತಲ್ಲಾ ಎಂಬ ಪ್ರಶ್ನೆಗೆ ನನ್ನನ್ಯಾರೂ ಲವ್ ಮಾಡೊಲ್ಲ ರೀ ಎಂದು ನಕ್ಕಿದ್ದಾರೆ.

ನಟ ರೂಪೇಶ್ ಸಧ್ಯ ಸರ್ಕಸ್ ಸಿನಿಮಾ ತೆರೆಗೆ ಬಂದಿದೆ. ಸರ್ಕಸ್ ಬಳಿಕ ರೂಪೇಶ್ ರ ಮುಂದಿನ ಸಿನಿಮಾ ಯಾವ್ದು..? ಕಾಂತಾರ ಪಾರ್ಟ್ 2 ಸಿನಿಮಾದಲ್ಲಿ ನಟಿಸೋ ಪ್ಲ್ಯಾನ್ ಇದ್ಯಾ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂತಾರ ಪಾರ್ಟ್ 2 ನ್ನ ಇಡೀ ದೇಶವೇ ಕಾತುರದಿಂದ ಕಾದು ನೋಡ್ತಿರುವ ಸಿನಿಮಾ. ಸಿನಿಮಾದಲ್ಲಿ ನಟಿಸ್ತಿನೋ ಇಲ್ವೋ ಎಂದು ನಾನು ಹೇಳಲು ಬರಲ್ಲ. ಆದ್ರೆ ಕಾಂತಾರ ಸಿನಿಮಾದಲ್ಲಿ ದೊಡ್ಡ ರೋಲ್ ಸಿಗ್ದಿದ್ರೂ ಸಣ್ಣ ಚಾನ್ಸ್ ಸಿಕ್ರೂ ನಂಗೆ ಖುಷಿ ಇದೆ. ಆದರೆ ಇದು ಸಂಪೂರ್ಣ ರಿಷಬ್ ಅವ್ರ ನಿರ್ಧಾರ. ನಾನು ನೋಡಿದಂತೆ ರಿಷಬ್ ಅವ್ರು ಪಾತ್ರದ ಬೇಡಿಕೆ ಅನುಗುಣವಾಗಿ ಅವಕಾಶ ಕೊಡ್ತಾರೆ. ಅವ್ರ ಜೊತೆಗೆ ಕೆಲಸ ಮಾಡೋದೇ ನಂಗೊಂದು ಕನಸ್ಸು ಎಂದರು.

ಸಿನಿಮಾ ಬಿಟ್ಟು ಬೇರೆನಾದ್ರೂ ಖಾಸಗಿ ಪ್ಲ್ಯಾನ್ ನಡೀತಿದ್ಯಾ..? ರೂಪೇಶ್ ಲವ್ ನಲ್ಲಿದ್ದಾರೆ ಅಂತಲೆಲ್ಲಾ ಸುದ್ದಿ ಹರಿದಾಡ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಂಗೆ ಯಾವ ಲವ್ ಇಲ್ಲ.. ನನ್ನ ಲವ್ ಸಿನಿಮಾ ಅಷ್ಟೇ.. ಕಳೆದ ಎರಡು ತಿಂಗಳಿಂದ ನಾನು ಮನೆಗೆ ಹೋಗಿರೋದೇ 10 ದಿ‌ನ. ರಾತ್ರಿ ಎಲ್ಲಾ ಕೆಲಸ ಮಾಡ್ತೀನಿ. ನನ್ನಂತವ್ರನ್ನ ಯಾರ್ ಲವ್ ಮಾಡ್ತಾರೆ. ಸಧ್ಯಕ್ಕೆ ನಾನು ಸಿಂಗಲೇ ಇದ್ದೀನಿ. ನಾನು ಕೆಲಸ ಮಾಡ್ಬೇಕು ಎಂದು ಹೇಳಿದ್ರು.

More News

You cannot copy content of this page