ಬೆಂಗಳೂರು: ತನಿಖೆಯನ್ನೇ ಬೇರೆ ಮಾಡ್ತೇವೆ..ನೇಮಕಾತಿಯ ಪ್ರಕ್ರಿಯೆ ಯನ್ನೇ ಬೇರೆ ಮಾಡ್ತೇವೆ. ಅದನ್ನ ಟೈಯಪ್ ಮಾಡಿಕೊಂಡರೆ ನೇಮಕಾತಿ ಮಾಡಲು ಆಗಲ್ಲ. ಆದರೆ, ಈಗಾಗಲೇ ಕರೆದಿರುವ 400 PSI ಹುದ್ದೆಗಳು ಕೇಸ್ ಇತ್ಯರ್ಥದ ಬಳಿಕ ನೇಮಕಾತಿ ಆದೇಶ ಹೊರಡಿಸಲಾಗ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಸಬ್ ಇನ್ಸ್‌ಪೆಕ್ಟರ್ (PSI) ನೇಮಕಾತಿ ಹಗರಣದ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿದ್ದು,
ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಆಯೋಗ ರಚಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಹೌದು ನಿನ್ನೆ ಆದೇಶ ಮಾಡಿದ್ದೇವೆ. ನ್ಯಾಯದೀಶರಾದ ವೀರಪ್ಪ ಅವರನ್ನು ನೇಮಕ ಮಾಡಿ, ಏಕ ಸದಸ್ಯತ್ವದಲ್ಲಿ ತನಿಖೆ ಆಗಬೇಕು ಎಂದು ಹಿಂದೆ ಅಂದರೆ ವಿಪಕ್ಷದಲ್ಲಿ ಇದ್ದಾಗ ಹೇಳಿದ್ದೆವು. ಈಗ ಸಿಎಂ ಅವರು ನ್ಯಾಯಾಂಗ ತನಿಖೆ ಮಾಡ್ತೇವೆ ಎಂದು ಹೇಳಿದ್ರು. ಸತ್ಯಾಸತ್ಯೆಗಳನ್ನು ಹೊರಗೆ ತರಬೇಕು ಎಂದರು.

ಮುಂದುವರೆದು ಮಾತನಾಡಿದ ಅವರು, ಈಗ ತನಿಖೆಯನ್ನೇ ಬೇರೆ ಮಾಡ್ತೇವೆ..ನೇಮಕಾತಿಯ ಪ್ರಕ್ರಿಯೆ ಬೇರೆ ಮಾಡ್ತೇವೆ. ಅದಕ್ಕೂ ಇದಕ್ಕೂ ಟ್ಯಾಲಿ ಮಾಡಲು ಹೋಗಲ್ಲ…ಅದನ್ನ ಟೈಯಪ್ ಮಾಡಿಕೊಂಡರೆ ನೇಮಕಾತಿ ಮಾಡಲು ಆಗಲ್ಲ. ಇನ್ನೊಂದು ನೇಮಕಾತಿ ಆಗಬೇಕು. 400 ಹುದ್ದೆಗಳು ಕೂಡ ಕೇಸ್ ಇತ್ಯರ್ಥದ ಬಳಿಕ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.