ಹುಬ್ಬಳ್ಳಿ:ಅಕ್ಕಿ ಬದಕು ಜೋಳ ಕೊಡಿ, ರೊಕ್ಕಾ ಉಳಿಯಂಗಿಲ್ಲಾ. ಅಕ್ಕಿ ಕೊಟ್ಟರೆ ಹೊಟ್ಟಿ ತುಂಬಾ ಊಟ ಮಾಡುತ್ತೇವೆ. ಬಹುತೇಕ ಜನರ ಅಭಿಪ್ರಾಯ ಇದು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಬಡವರಿಗೆ ಹತ್ತು ಕಿಲೋ ಉಚಿತವಾಗಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಅಕ್ಕಿ ಸಿಗದ ಕಾರಣ ಐದು ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಗೆ 170 ಹಣವನ್ನು ಮನೆಯ ಯಜಮಾನಿ ಬ್ಯಾಂಕ್ ಖಾತೆಗೆ ಸಂದಾಯ ಮಾಡುವ ಮತ್ತೊಂದು ತೀರ್ಮಾನಕ್ಕೆ ಹುಬ್ಬಳ್ಳಿ ಜನರು ಆಕ್ರೋಶ ವ್ಯಕ್ತಪಡಿಸಿದರು.
ಹೌದು.. ಕೊಟ್ಟ ಗ್ಯಾರಂಟಿಯಲ್ಲಿ ತಪ್ಪಿ ನಡೆತಾ ಇದ್ದಾರೆ. ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡಬೇಕು.ಈಗ ಅವರ ಮ್ಯಾಲ್ ಇವರ ಮ್ಯಾಲ್ ಹಾಕಬಾರದು ಎನ್ನುವ ಜನರು ಈಗ ಅಕ್ಕಿ ಬದಲು ಜೋಳ ಬೇಕು ಎನ್ನುತ್ತಾರೆ .
ನಾವು ಉತ್ತರ ಕರ್ನಾಟಕದ ಜನರು ಅನ್ನ ಊಟ ಮಾಡುವುದಕ್ಕಿಂತ ರೊಟ್ಟಿ ತಿನ್ನುವವರು. ಅದಕ್ಕೆ ನಮಗೆ ಜೋಳ ಕೊಡ್ರಿ ಎಂಬ ಒತ್ತಾಯ ಮಾಡಿದರು.

ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಪೈಕಿ ಅನ್ನ ಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿ ಬಡವರಿಗೆ ಕೊಡಬೇಕು, ಆದರೆ ಅಕ್ಕಿ ಸಾಕಾಗುವಷ್ಟು ಇರದ ಕಾರಣ ಐದು ಕೆಜಿ ಅಕ್ಕಿ ಬದಲು 170 ರೂಪಾಯಿ ಕೊಡುವುದು ಬೇಡಾ ಜೋಳ ಕೊಡಿ ಎಂದು ಪಟ್ಟು ಹಿಡಿದ್ದಾರೆ. ಹತ್ತು ಕೆಜಿ ಅಕ್ಕಿ ಯೋಜನೆಯಲ್ಲಿ ಐದು ಕೆಜಿ ಅಕ್ಕಿ ವಿತರಿಸಿ ಉಳಿದ ಐದು ಕೆಜಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ದಾರರಿಗೆ ಮಾಸಿಕ ತಲಾ 170 ರೂ. ನೀಡುವುದು ಬೇಡಾ ಎನ್ನುತ್ತಾರೆ. ಜುಲೈ
ತಿಂಗಳಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಮಾಡುವ ಯೋಜನೆಗೆ ಜನರು ಒಪ್ಪತಾ ಇಲ್ಲ.
ಎಸ್. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಕುರಿತು ಆಹಾರ ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದರು ಅದೇ ರೀತಿ ಜಾರಿ ಸಹ ಮಾಡಲಾಗಿದ್ದು, ಆದರೆ ಈ ಬಗ್ಗೆ ಹುಬ್ಬಳ್ಳಿಯ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೇ ಹುಬ್ಬಳ್ಳಿ ಜನರಿಗೆ ಅಕ್ಕಿ ಬೇಡವಂತೆ.

ಪ್ರತಿ ಬಿಪಿಎಲ್ ಕುಟುಂಬದ ಕಾರ್ಡ್ ಗಳಲ್ಲಿ ಮನೆಯ ಯಜಮಾನಿ ಯಾರು ಎಂದು ನಮೂದಾಗಿರುತ್ತದೋ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ಬಿಪಿಎಲ್ ಕಾರ್ಡುದಾರರ ಮಾಹಿತಿ ನಮ್ಮ (ಸರ್ಕಾರ) ಬಳಿಯಿದೆ. ಆ ಕಾರ್ಡಗಳಲ್ಲಿ ಪ್ರಮುಖವಾಗಿ ಉಲ್ಲೇಖವಾಗಿರುವವರ ಹೆಸರು, ಅವರ ಬ್ಯಾಂಕ್ ಖಾತೆಗಳ ವಿವರಗಳು ಸರ್ಕಾರದ ಬಳಿಯಿವೆ. ಅದರ ಆಧಾರದಲ್ಲಿ ಸರ್ಕಾರ ಹಣ ಜಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ಆದರೆ ಇಲ್ಲಿ ಕುಟುಂಬದ ಯೋಜಮಾನ ಅಥವಾ ಯಜಮಾನಿಯ ಬ್ಯಾಂಕ್ ಖಾತೆ ಇಲ್ಲದಿದ್ದರೆ ಹೇಗೆ ಮತ್ತು ಕೆಲವು ಕುಟುಂಬದ ಸದಸ್ಯರು ಕುಟುಂಬದ ಮುಖ್ಯಸ್ಥರಿಗೆ ಹಣ ಸಂದಾಯ ಮಾಡಲು ಒಪ್ಪಲ್ಲ. ಏಕೆಂದರೆ ಅವರು ಹಣ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಆದ್ದರಿಂದ ಈಗ ಅಕ್ಕಿ ಬದಲು ರೊಕ್ಕಾ ಬೇಡಾ ನಮಗೆ ಅಕ್ಕಿನೇ ಕೊಡಿ ಇಲ್ಲವಾದರೆ ಜೋಳ ಕೊಡಿ ಎನ್ನುತ್ತಾರೆ.