ಬೆಂಗಳೂರು: ತಿರುಪತಿ ತಿರುಮಲ ದೇಗುಲದಲ್ಲಿ ಲಡ್ಡು ಪ್ರಸಾದಕ್ಕೆ ಕೆಎಂಎಫ್ ತುಪ್ಪ ಸಪ್ಲೈ ವಿವಾದ ಕುರಿತು ರಾಜ್ಯ ಹಾಲು ಒಕ್ಕೂಟ ಮಂದಾಗಿದ್ದು, ಟಿಟಿಡಿ ಆಡಳಿತ ಮಂಡಳಿಗೆ ನೇರವಾಗಿ ಕೆಎಂಎಫ್ ಪತ್ರ ಬರೆದಿದೆ.
ಕೆಎಂಎಫ್ ಟಿಟಿಡಿಗೆ ಬರೆದಿರುವ ಪತ್ರ ದಿ ನ್ಯೂಸ್ ಪೆಗ್ ಗೆ ಲಭ್ಯವಾಗಿದ್ದು, ಕೆಎಂಎಫ್ ಅಧಿಕಾರಿಗಳು ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ನಾವು ಪ್ರತಿ ವರ್ಷ 30 ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದನೆ ಮಾಡುತ್ತೇವೆ, ನಾವು ನಿಮಗೆ ತುಪ್ಪ ಸಪ್ಲೈ ಮಾಡಲು ತುಂಬಾ ಉತ್ಸುಕರಾಗಿದ್ದೇವೆ, ಒಂದು ಸಭೆಯನ್ನು ನಮ್ಮ ಜೊತೆ ಆಯೋಜನೆ ಮಾಡಿ, ದರದ ಬಗ್ಗೆ ಚರ್ಚೆ ಮಾಡೋಣ ಎಂದು ಪತ್ರದಲ್ಲಿ ನಮೂದಿಸಿದೆ.
ನಮ್ಮದು ಸಹಕಾರ ಸಂಸ್ಥೆಯಾಗಿದ್ದು ಟೆಂಡರ್ ನಲ್ಲಿ ಭಾಗಿಯಾಗಿಲ್ಲ, ತುಂಬಾ ಗುಣಮಟ್ಟದ ತುಪ್ಪವನ್ನು ನಂದಿನಿ ಸಂಸ್ಥೆ ಗ್ರಾಹಕರಿಗೆ ತಲುಪಿಸುತ್ತಾ ಬಂದಿದೆ, ಹೀಗಾಗಿ ಟಿಟಿಡಿಗೂ ಕೂಡ ತುಪ್ಪ ನೀಡಲು ನಾವು ಖುಷಿಯಿಂದ ಕಾತುರರಾಗಿದ್ದೇವೆ ಎಂದು ಕೆಎಂಎಫ್ ವತಿಯಿಂದ ಟಿಟಿಡಿಗೆ ಪತ್ರದಲ್ಲಿ ನಮೂದಿಸಲಾಗಿದೆ.

ತುಪ್ಪ ನೀಡಲು ನಾವು ರೆಡಿ ಎಂದು ಕೆಎಂಎಫ್ ಪತ್ರ ಬರೆದು ಅನೇಕ ಅನುಮಾನ, ಎಲ್ಲಾ ವಿವಾದಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದೆ. ಹಾಗೆಯೇ ಪತ್ರದಲ್ಲಿ ಕಳಪೆ ಗುಣಮಟ್ಟದ ತುಪ್ಪವನ್ನು ಖರೀದಿಸುತ್ತಿದೆ ಎಂದು ಕೆಎಂಎಫ್ ಆರೋಪ ಮಾಡಿಲ್ಲ, ಇವೆಲ್ಲಾ ಉಹಾಪೋಹ ಎಂದು ಪತ್ರದಲ್ಲಿ ತಿಳಿಸಿದೆ.
ಪತ್ರಕ್ಕೆ ಕೆಎಂಎಫ್ ಸಂಸ್ಥೆಯ ಎಂಡಿ ಅವರು ಸಹಿ ಹಾಕಿದ್ದು, ಟಿಟಿಡಿ ಆಡಳಿತ ಮಂಡಳಿಗೆ ಪತ್ರವನ್ನು ಕಳುಹಿಸಿದ್ದಾರೆ.