ಕಾಲೇಜ್ ಮೇಲೆ ಸೇಡು ತೀರಿಸಿಕೊಳ್ಳಲು ಇನ್ ಸ್ಟಾ ದಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಪೊಟೋ ಅಪ್ಲೋಡ್ ಮಾಡಿದ್ದ ಸಮರ್ಥ ಕಾಲೇಜ್ ನ ಹಳೇ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಸಮರ್ಥ ಕಾಲೇಜ್ ನ ಹಳೇ ವಿದ್ಯಾರ್ಥಿ ರಜನಿಕಾಂತ್ ಬಂಧಿತ ಆರೋಪಿ. ರಜನಿಕಾಂತ್ ಇನ್ ಸ್ಟಾ ದಲ್ಲಿ ಸಮರ್ಥ ಕಾಲೇಜ್ ವಿದ್ಯಾರ್ಥಿನಿಯ ಪೊಟೋ ಅಶ್ಲೀಲವಾಗಿ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದ. Kashmira1990_0 ಹೆಸರಿನ ಫೇಕ್ ಅಕೌಂಟ್ ಕ್ರೀಯೇಟ್ ಮಾಡಿ, ಫೊಟೋ ಅಪ್ಲೋಡ್ ಮಾಡಿ
ವಿಕೃತಿ ಮೆರೆಯುತ್ತಿದ್ದವನ ಹೆಡೆಮುರಿಯನ್ನು ಪೊಲೀಸರು ಕಟ್ಟಿದ್ದಾರೆ.

ರಜನಿಕಾಂತ್ ಸಮರ್ಥ ಕಾಲೇಜ್ ನ ಹಳೇ ವಿದ್ಯಾರ್ಥಿ ಯಾಗಿದ್ದು, ಕಳೆದ ವರ್ಷ ದಾಖಲಾತಿ ಕಡಿಮೆ ಇರೋ ಕಾರಣ ಪರೀಕ್ಷೆಗೆ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಕಾಲೇಜ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ರಜನೀಕಾಂತ್, ವಿದ್ಯಾರ್ಥಿನಿಯರ ಫೋಟೋವನ್ನು ಎಡಿಟ್ ಮಾಡಿ, ಫೇಕ್ ಅಕೌಂಟ್ ನಲ್ಲಿ ಪ್ರಚಾರ ಮಾಡಿದ್ದ. ಇದರಿಂದ ಗಾಬರಿಗೆ ಒಳಗಾದ ವಿದ್ಯಾರ್ಥಿನಿಯರ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಇತ್ತ ವಿದ್ಯಾರ್ಥಿನಿಯರು ಸಹ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ರು. ದೂರು ದಾಖಲಾದ ಬಳಿಕ ಇನ್ ಸ್ಟಾ ದಲ್ಲಿ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿ ನಾಪತ್ತೆಯಾಗಿದ್ದವನನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.