ಬೆಂಗಳೂರು: ರಾಘು ಸ್ಪಂದನಾ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಸ್ಪಂದನಾ ತುಂಬಾ ಒಳ್ಳೆಯ ಹುಡುಗಿ. ಏನು ಹೇಳಬೇಕೋ ಗೊತ್ತಾಗ್ತಿಲ್ಲ. ಮಗ ಶೌರ್ಯ ಇನ್ನೂ ಚಿಕ್ಕವನು ಎಂದು ನಟಿ ಸುಧಾರಾಣಿ ಭಾವುಕ ರಾದರು.
ಸ್ಪಂದನಾ ರಾಘವೇಂದ್ರ ಅಂತಿಮ ದರ್ಶನಕ್ಕೆ ಮಲ್ಲೇಶ್ವರಂ ನಿವಾಸದ ಬಳಿ ಗಣ್ಯರು ಆಗಮಿಸುತ್ತಿದ್ದಾರೆ. ಈ ವೇಳೆ
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಟಿ ಸುಧಾರಾಣಿ, ರಾಘು- ಸ್ಪಂದನಾ ಒಳ್ಳೆಯ ಸಂಸ್ಕೃತಿ ಇದ್ದ ದಂಪತಿ. ಈ ಜೋಡಿಯ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಸ್ಪಂದನಾ ಮೃದು ಸ್ವಭಾವದ ಹುಡುಗಿಯಾದರು. ನಾವು ಎಲ್ಲೇ ಮೀಟ್ ಮಾಡಿದ್ರೂ ನಗು ನಗುತಾ ಮಾತಾಡ್ತಿದ್ದರು. ಇತ್ತೀಚೆಗೆ ಸಿಕ್ಕಿದ್ದರು. ಹೆಚ್ಚಿಗೆ ಮಾತಾಡೋಕೆ ಆಗಲಿಲ್ಲ. ಏನು ಹೇಳಬೇಕೋ ಗೊತ್ತಾಗ್ತಿಲ್ಲ. ಮಗ ಶೌರ್ಯ ಇನ್ನೂ ಚಿಕ್ಕವನು. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ. ಮುಖ್ಯವಾಗಿ ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ ಎಂದರು.
“ರಾಘು ನೆನೆಸಿಕೊಂಡು ಬಹಳ ನೋವಾಗ್ತಿದೆ”

ಫೀಲ್ಮೇ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್ ಮಾತನಾಡಿ,
ಕರ್ನಾಟಕ, ಚಿತ್ರೋದ್ಯಮದಲ್ಲಿ ದುಃಖದ ವಾತಾವರಣ ಇದೆ. ವಿಜಯ ರಾಘವೇಂದ್ರ ,ಕುಟುಂಬಕ್ಕೆ ಎಲ್ಲಾರಿಗೂ ಧೈರ್ಯ ಭಗವಂತ ಕೊಡಲಿ.ರಾಘು ನೆನೆಸಿಕೊಂಡು ಬಹಳ ನೋವಾಗ್ತಿದೆ. ಸ್ಪಂದನಾ ಆತ್ಮಕ್ಕೆ ದೇವರು ಶಾಂತಿ ಕೊಡಲಿ ಎಂದು ಹೇಳಿದರು.
“ಸ್ಪಂದನಾ ನಗ್ತಾ ಮಲಗಿದ ಹಾಗೆ ಅನಿಸ್ತಿದೆ”
ಸ್ಪಂದನಾ ನಗ್ತಾ ಮಲಗಿದ ಹಾಗೆ ಅನಿಸ್ತಿದೆ . ನಿಜಾವಾಗ್ಲು ತುಂಬಾ ನೋವಿನ ಸಂಗತಿ ಎಂದು ನಿರ್ಮಾಪಕ ಕೆ ಮಂಜು ಬೇಸರ ವ್ಯಕ್ತಪಡಿಸಿದರು. ರಾಘು ಚಿತ್ರರಂಗದಲ್ಲಿ ಒಳ್ಳೇ ವ್ಯಕ್ತಿ.ಸ್ಪಂದನಾನು ಅಷ್ಟೇ ಸಂಪ್ರದಾಯ ಹುಡುಗಿ. ಸ್ಪಂದನಾ ಮಲಗಿರೋತರ ಕಾಣ್ತಿದೆ. ನಿಜಕ್ಕೂ ಇದು ಬೇಸರ ಸಂಗತಿ ಎಂದು ಬೇಸರಗೊಂಡರು.

ನಟ ಹರೀಶ್ ಮಾತನಾಡಿ, ರಾಘು ನನ್ನ ಗೆಳೆಯ. ಬೆಳೆದಿಂಗಳು ಬಾ ಚಿತ್ರದಲ್ಲಿ ನಟನೆ ಮಾಡಿದ್ವಿ. ಹಲವಾರು ಕಾರ್ಯ ಕ್ರಮದಲ್ಲಿ ಸಿಗ್ತಿದ್ವಿ. ಬಹಳ ಸಿಂಪಲ್ ಪರ್ಸನ್. ಚಿಕ್ಕ ಮಗು ಇದೆ ..ಇಬ್ಬರ ಜೋಡಿ ಅದ್ಭುತ ಇತ್ತು. 14 ವರ್ಷ ಮಗು ಇದೆ. ರಾಘು ಧೈರ್ಯ ತುಂಬಿದ್ದೇನೆ. ಮಗನ ನೋಡಿ ಮುಂದೆ ಬದುಕು ಅಂತ ಎಂದು ತಿಳಿಸಿದರು.
ರಾಘು ಅವನ ಪ್ರೀತಿಯನ್ನು ಕಳೆದುಕೊಂಡು
ತಂದೆಯಾಗಿ, ಅಣ್ಣನಾಗಿ, ಮಗನಾಗಿ ಹೇಗೆ ನಿಭಾಯಿಸುತ್ತಾನೆ ಅನ್ನೋದೆ ಚಿಂತೆ ಎಂದು ನಟ ಮಾಸ್ಟರ್ ಆನಂದ್ ಬೇಸರಗೊಂಡರು.
ಇದನ್ನೆಲ್ಲ ನಿಭಾಯಿಸಲು ರಾಘುಗೆ ದೇವರು ಶಕ್ತಿ ಕೊಡಬೇಕು. ನಾನು ಅಳಬಾರದು ಎಂದು ಮನಸ್ಸು ಗಟ್ಟಿ ಮಾಡಿಕೊಂಡು ಬಂದೆ.ಆಗಷ್ಟೇ ಅವನಿಗೆ ಧೈರ್ಯ ಹೇಳಲು ಸಾಧ್ಯ ಅಂತ ಬಂದೆ. ಆದ್ರೆ ಸ್ಪಂದನ ಮುಖ ನೋಡಿದಾಗ ಆ ಮುಖದಲ್ಲಿ ಯಾವಾಗಲೂ ಲಕ್ಷ್ಮಿ ಕಳೆ ಇರುತ್ತಿತ್ತು. ನಗು ಇರ್ತಿತ್ತು. ಅದನ್ನು ನೆನದು ದುಖಃ ತಡೆಯೋದಕ್ಕೆ ಆಗಲಿಲ್ಲ ಎಂದು ಕಂಬನಿ ಮಿಡಿದರು.