ಬೆಂಗಳೂರು : ಕಾಂಬೋಡಿಯಾ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿಗಳಾದ H D ಕುಮಾರಸ್ವಾಮಿ ಅವರು ಐತಿಹಾಸಿಕ ಪ್ರಸಿದ್ಧವಾದ ಆಂಗ್‌ಕರ್ ವಾಟ್ ದೇವಾಲಯಕ್ಕೆ ಭೇಟಿ ನೀಡಿ, ಪರಮ ಶಿವನಿಗೆ ಪೂಜೆ ಸಲ್ಲಿಸಿದರು.

ಜಗತ್ತಿನಲ್ಲಿಯೇ ಬೃಹತ್ ಹಿಂದೂ ದೇವಾಲಯ ಇದಾಗಿದೆ. ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿ ಮಾಜಿ ಸಚಿವರಾದ ಸಾ ರಾ ಮಹೇಶ್, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ, ಮಂಜುನಾಥ್ ಮುಂತಾದವರು ಇದ್ದರು.


