CORRUPTION IN ATM Govt..?: ಸಿಎಂ ಅವರ ಅನುಮೋದನೆಗೂ ಮೊದಲು 223 ಪಿಡಿಓ ಪಟ್ಟಿ ಬಹಿರಂಗಕ್ಕೆ ಬಿಜೆಪಿ ತೀವ್ರ ಆಕ್ರೋಶ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಗೂ ಮೊದಲೇ 223 ಪಿಡಿಓಗಳ ವರ್ಗಾವಣೆ ಪಟ್ಟಿ ಬಹಿರಂಗಗೊಂಡಿರುವುದಕ್ಕೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ.
ಟ್ವೀಟರ್ ಖಾತೆಯಲ್ಲಿ ಎಟಿಎಂ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ, ಇಂತಹ ವರ್ಗಾವಣೆ ದಂಧೆಗೆ ಕೊನೆಯಿಲ್ಲವೇ ಎಂದು ಪ್ರಶ್ನಿಸಿದೆ. ಹಾಗೆಯೇ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದೆ.
ಟ್ವೀಟರ್ ಸಂಪೂರ್ಣ ವಿವರ ಇಲ್ಲಿದೆ.


ದೆಹಲಿಯಲ್ಲಿ ಇರುವ ತಮ್ಮ ಯಜಮಾನರ ಹಸಿವು ನೀಗಿಸಲು ದಂಧೆಗಿಳಿದಿರುವ #ATMSarkara ಮಾಡುತ್ತಿರುವ ವರ್ಗಾವಣೆ‌ ದಂಧೆಗೆ ಕೊನೆಯೇ ಇಲ್ಲದಾಗಿದೆ.
223 ಪಿಡಿಒಗಳ ವರ್ಗಾವಣೆ ಪಟ್ಟಿಯನ್ನು ಅನುಮೋದನೆಗೂ ಮೊದಲು ವಾಟ್ಸಾಪ್‌ನಲ್ಲಿ ಹರಿಬಿಟ್ಟು @INCKarnataka ಸರ್ಕಾರ ಈಗಾಗಲೇ ಹೇರಳವಾಗಿ ಕಲೆಕ್ಷನ್ ಮಾಡಿದೆ.
ಎಲ್ಲಾ ಇಲಾಖೆಗಳಲ್ಲೂ ಕೈಯಾಡಿಸುವ ಅತ್ಯುತ್ಸಾಹ ತೋರುವ @PriyankKharge ಅವರು ಚಾಣಾಕ್ಷತೆಯಿಂದ ಪ್ರಕರಣವನ್ನು ಈಗಲೇ ಅಧಿಕಾರಿಗಳ ತಲೆಗೆ ಕಟ್ಟುವ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

More News

You cannot copy content of this page