ವಾಷಿಂಗ್ಟನ್ : 2020ರ ಚುನಾವಣಾ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಲ್ಲಿಯ ಪೊಲೀಸರು ಬಂಧಿಸಿ, ನಂತರ 200,000 ಡಾಲರ್ ಬಾಂಡ್ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಚುನಾವಣೆ ಸಂದರ್ಭದಲ್ಲಿ ವಂಚನೆ ಮತ್ತು ಸಂಚು ಆರೋಪಗಳ ಅಡಿಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. 2020ರ ಚುನಾವಣೆಯ ಫಲಿತಾಂಶವನ್ನು ತಲೆಕೆಳಗಾಗಿಸಲು ಟ್ರಂಪ್ ಅವರು ಇತರೆ 18 ಜನರೊಂದಿಗೆ ಸೇರಿ ಪಿತೂರಿ ನಡೆಸಿದ್ದರು ಎಂಬ ಆರೋಪ ಅವರ ಮೇಲಿತ್ತು.
ಅಟ್ಲಾಂಟಾದ ಫುಲ್ಟೋನ್ ಕೌಂಟಿ ಜೈಲಿನ ಒಳಗೆ ಸುಮಾರು 30 ನಿಮಿಷಗಳ ಕಾಲ ಇದ್ದರು ಎಂದು ತಿಳಿದುಬಂದಿದೆ. ನಂತರ ಅವರನ್ನು ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ನಂತರ ಅವರು ತಮ್ಮ ಬೆಂಗಾವಲು ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಅಮೆರಿಕಾದ ಇತಿಹಾಸದಲ್ಲಿಯೇ ಮಾಜಿ ಅಧ್ಯಕ್ಷರೊಬ್ಬರು ಜೈಲಿಗೆ ಹೋದಿದ್ದು ಇದೊಂದು ಇತಿಹಾಸವಾಗಿದೆ.

ಮುಖ ಗಂಟಿಕ್ಕಿಕೊಂಡು ಕ್ಯಾಮರಾ ಕಡೆ ನೋಡುವ ಫೋಟೋವನ್ನು ಅಲ್ಲಿನ ಪೊಲೀಸರು ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಅವರು ಕಡು ನೀಲಿ ಸೂಟ್, ಬಿಳಿ ಅಂಗಿ ಮತ್ತು ಕೆಂಪು ಟೈ ತೊಟ್ಟಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅಮೆರಿಕಕ್ಕೆ ದುಖದ ದಿನ ಎಂದು ಹೇಳಿದ್ದಾರೆ. ಇಲ್ಲಿ ನ್ಯಾಯದ ಅಣಕ ನಡೆದಿದೆ. ನಾನು ಯಾವ ತಪ್ಪೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫುಲ್ಟೋನ್ ಕೌಂಟಿ ಜೈಲಿನಲ್ಲಿ ಟ್ರಂಪ್ ಅವರಿಗೆ ಖೈದಿ ಸಂಖ್ಯೆ PO1135809′ ಅನ್ನು ನೀಡಲಾಗಿತ್ತು.
#DONALDTRUMP #AMERICAFORMERPRESIDENT #HISTORY #PRESIDENTARRESTED #BAILED #TRUMP