ಕಾಸು ಬರೋವರೆಗೂ ಸ್ವಾಮೀಜಿಯಾಗಿದ್ದು, ಕೇಸ್ ಬೀಳ್ತಿದ್ದ ಹಾಗೆ ಗೆಟಪ್ ಬದಲಿಸಿಕೊಂಡು ಟೀ ಶರ್ಟ್ ಶಾಟ್ಸ್ ಹಾಕಿ ಊರೂರು ಅಲೆದಾಡ್ತಿದ್ದ ಚೈತ್ರಾ ಕುಂದಾಪುರ ಗ್ಯಾಂಗ್ ನ ಎ3 ಆರೋಪಿ ಹಾಲಶ್ರೀ ಅಂದರ್ ಆಗಿದ್ದು,
ಇಂದು ಸ್ವಾಮೀಜಿಯನ್ನ ಕಸ್ಟಡಿಗೆ ಪಡೆದು ಅಧಿಕೃತವಾಗಿ ವಿಚಾರಣೆ ಆರಂಭಿಸಲಾಗಿದೆ.
ಉದ್ಯಮಿಗೆ ಕೋಟಿ ಕೋಟಿ ವಂಚನೆ ಕೇಸ್‍ನಲ್ಲಿ ಎ-3 ಆರೋಪಿ ಹಾಲಶ್ರೀ ಚೈತ್ರಾ ಕುಂದಾಪುರ ಬಂಧನವಾಗ್ತಿದ್ದ ಹಾಗೇ ಎಂಟು ದಿನಗಳ ಕಾಲ ಮೊಬೈಲ್ ಸ್ವಿಚ್ಡ್ ಆಫ್ ಮಾಡ್ಕೊಂಡು ತಲೆಮರೆಸಿಕೊಂಡಿದ್ದರು. ಕಾರ್ ಡ್ರೈವರ್ ನ್ನ ಬಿಟ್ಟು ತಾವೇ ಕಾರು ಚಲಾಯಿಸಿಕೊಂಡು ಹೋಗಿದ್ದ ಹಾಲಶ್ರೀ, ದಿನಕ್ಕೊಂದು ಜಾಗ ಬದಲಿಸುತ್ತಾ ಓಡಾಡಿದ್ದಾರೆ.
ಕೊನೆಗೂ ಹಾಲಶ್ರೀಯನ್ನ ಅಂದರ್ ಮಾಡಲು ಪ್ಲ್ಯಾನ್ ಮಾಡಿದ ಖಾಕಿ ಪಡೆ, ಅರ್ಚರ ಗೆಟಪ್ ನಲ್ಲಿ ಸಂಶಯ ಬಂದ ಜಾಗಕ್ಕೆ ಭೇಟಿ ನೀಡಿ ತಲಾಷ್ ನಡೆಸಿದ್ದಾರೆ. ಹೈದರಾಬಾದ್ ಕಡೆಯಿಂದ ಉತ್ತರ ಭಾರತದ ಕಡೆ ಹೋಗಿರೋ ಮಾಹಿತಿ ಸಿಕ್ಕ ಬೆನ್ನಲ್ಲೇ ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಅರ್ಚಕರ ವೇಷ ಹಾಕಿ, ಶೃಂಗೇರಿ ದೇವಸ್ಥಾನದ ಅರ್ಚಕರ ರೀತಿ ಮಡಿಬಟ್ಟೆ ಧರಿಸಿ ಫೀಲ್ಡ್ ಗೆ ಇಳಿದು ಕೊನೆಗೂ ಯಶಸ್ವಿ ಬೇಟೆಯಾಗಿದ್ದಾರೆ.

ನಿನ್ನೆ ಒಡಿಸ್ಸಾದ ಕಟಕ್ ನಲ್ಲಿ ಬಂಧಿಸಿ, ಸಂಜೆ ಬೆಂಗಳೂರಿಗೆ ಆರೋಪಿಯನ್ನ ಕರೆತರಲಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಅಭಿನವ ಹಾಲಶ್ರೀಗೆ 36 ವರ್ಷ ವಾಗಿದ್ದು, ಬಿಪಿ, ಶುಗರ್, ಅಸ್ತಮಾ ಸಮಸ್ಯೆ ಇಲ್ಲ. ಎಲ್ಲವೂ ನಾರ್ಮಲ್ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದು, ಇಂದು ಬೆಂಗಳೂರಿನ ಎಸಿಎಂಎಂ ಕೋರ್ಟ್‍ಗೆ
ಹಾಜರು ಪಡಿಸಲಾಯಿತು.
ಹಾಲಶ್ರೀಯನ್ನು ಸಿಸಿಬಿ ಕೋರ್ಟಿಗೆ ಹಾಜರುಪಡಿಸಿದ ನಂತರ ಸೆಪ್ಟಂಬರ್ 29 ರ ವರೆಗೆ ಕಸ್ಟಡಿಗೆ ಪಡೆದಿದ್ದು, ಸಿಸಿಬಿ ಮಹಜರು ಪ್ರಕ್ರಿಯೆ ನಡೆಸಲಿದೆ. ಇನ್ನು ನಿನ್ನೆ ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಹಾಲಶ್ರೀ ಸ್ಪಂದಿಸಿದ್ದು, ಚೈತ್ರಾ, ಗಗನ್ ಇಬ್ಬರ ಬಗ್ಗೆಯೂ ಉತ್ತರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ದೊಡ್ಡ ದೊಡ್ಡವರ ಹೆಸರು ಹೊರ ಬೀಳುತ್ತಾ ಎಂಬುದನ್ನ ಕಾದು ನೋಡ್ಬೇಕಿದೆ.