ICC World Cup: ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ: ಮಹತ್ವದ ಟೂರ್ನಿಯ ಥೀಮ್ ಸಾಂಗ್ ರಿಲೀಸ್

ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ನಡುವೆ ಟೂರ್ನಿಯ ಅಧಿಕೃತ ಗೀತೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಇಂದು ಬಿಡುಗಡೆ ಮಾಡಿದೆ.

‘ದಿಲ್ ಜಶ್ನ್ ಬೋಲೆ’ ಎಂಬ ಈ ಗೀತೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಜನಪ್ರಿಯ ಗೀತೆ ಸಂಯೋಜಕ ಪ್ರೀತಮ್ ಅವರು ಸಂಗೀತ ರಚಿಸಿದ್ದಾರೆ. ಈ ಗೀತೆಯಲ್ಲಿ ಭಾರತದ ಲೆಗ್ ಸ್ಪಿನ್ನರ್ ಆಗಿರುವ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಹಾಗೂ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಕೂಡ ಇದ್ದಾರೆ. ಒಟ್ಟು ಮೂರು ನಿಮಿಷ ಹಾಗೂ 22 ಸೆಕೆಂಡುಗಳ ಈ ಗೀತೆಯಲ್ಲಿ ‘ವನ್ ಡೇ ಎಕ್ಸ್‌ಪ್ರೆಸ್’ ಥೀಮ್‌ನ ರೈಲು ಭಾರತದಲ್ಲಿ ಪ್ರಯಾಣಿಸುತ್ತದೆ.

https://x.com/ICC/status/1704384709646864506?s=20

ಭಾರತದಲ್ಲಿ ಕ್ರಿಕೆಟ್ ಅತೀ ದೊಡ್ಡ ಉತ್ಸಾಹವಾಗಿದೆ ಮತ್ತು ಇದುವರೆಗಿನ ಅತಿದೊಡ್ಡ ವಿಶ್ವಕಪ್‌ಗಾಗಿ ‘ದಿಲ್ ಜಶ್ನ್ ಬೋಲೆ’ ಅನ್ನು ರಚಿಸಿದ್ದು ನನಗೆ ಅಪಾರ ಗೌರವವಾಗಿದೆ. ಈ ಹಾಡು ಕೇವಲ 1.4 ಶತಕೋಟಿ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲದೆ, ಜಗತ್ತಿನ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳಿಗೂ ಅತಿದೊಡ್ಡ ಆಚರಣೆಯ ಭಾಗವಾಗಿದೆ.

ಅಲ್ಲದೇ ಅಭಿಮಾನಿಗಳು ತಮ್ಮ ಉತ್ಸಾಹವನ್ನು ಈ ಹಾಡಿನ ಹುಕ್-ಸ್ಟೆಪ್ ಮೂಲಕ ತೋರಿಸಲು ಅವಕಾಶ ಲಭಿಸಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಥೀಮ್‌ ಸಾಂಗ್ ಸ್ಪೂಟಿಫೈ, ಆ್ಯಪಲ್ ಮ್ಯೂಸಿಕ್, ಗಾನಾ, ಹಂಗಾಮಾ, ವಿಂಕ್, ಅಮೆಜಾನ್, ಇನ್ಸ್ತಗ್ರಮ್ ಹಾಗೂ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದಾಗಿದೆ.

ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದ್ದು, ಅಕ್ಟೋಬರ್ 5ರಿಂದ ಏಕದಿನ ಟೂರ್ನಿಯ ಅಧಿಕೃತ ಪಂದ್ಯಗಳು ಆರಂಭವಾಗಲಿದೆ.

More News

You cannot copy content of this page