ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ.ಎಕ್ಸಪ್ರೇಸ್ ರೈಲಿನ ವೇಗಕ್ಕೆ ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಬಲಿಯಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಸವಣೂರು ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಕುರಿ ಮಾಲೀಕ ರಮೇಶ ಮಕ್ಲಪ್ಪ ಲಮಾಣಿ ಸೇರಿದಂತೆ ಸವಣೂರು ತಾಲೂಕಿನ ಹತ್ತಿಮತ್ತೂರು ತಾಂಡದವರು
ತಮ್ಮ ಕುರಿಗಳೊಂದಿಗೆ ಬೆಂಗಳೂರು ಟು ಹುಬ್ಬಳ್ಳಿಯತ್ತ ಸಾಗುತ್ತಿದ್ದ ಎಕ್ಸಪ್ರೇಸ್ ಟ್ರೈನ್ ಹತ್ತಿದ್ದಾರೆ. ಈ ವೇಳೆ ರಭಸವಾಗಿ ತೆರಳಿದ ರೈಲಿನ ವೇಗಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿ ಸಾವನ್ನಪ್ಪಿದೆ.
ಲಕ್ಷಾಂತರ ರೂ.ಮೌಲ್ಯದ ಕುರಿ ಕಳೆದುಕೊಂಡು ಮಾಲೀಕ ರಮೇಶ ಮಗ್ಲಪ್ಪ ಲಮಾಣಿ ಆಕ್ರಂಧನ ಮುಗಿಲು ಮುಟ್ಟುವಂತಿತ್ತು. ದುರ್ಘಟನೆ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.