ದಾವಣಗೆರೆ: ಕೊರೊನಾ ಕೊಟ್ಟ ಏಟಿಗೆ ಇನ್ನೂ ಜನ ಸುಧಾರಿಸಿಕೊಳ್ತಿರುವ ಹೊತ್ತಲ್ಲೇ ವೈರಲ್ ಫೀವರ್, ಡೆಂಗ್ಯೂ ರಾಜ್ಯದಲ್ಲಿ ಆತಂಕದ ಛಾಯೆ ಮೂಡಿಸಿದೆ.
ಶಂಕಿತ ಡೆಂಗ್ಯೂಗೆ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಹೊಸಪೇಡೆಯಲ್ಲಿ ನಡೆದಿದೆ.
ಜಾನ್ಹವಿ ಮೃತಪಟ್ಟ ಶಾಲಾ ಬಾಲಕಿ. 13 ವರ್ಷದ ಜಾನ್ಹವಿ ಹೊಸಪೇಟೆ ವಿಜ್ಞಾನ ಇ-ಟೆಕ್ನೋ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದಳು. ವೈರಲ್ ಫೀವರ್ ಎಂದು ಹೊಸಪೇಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜಾನ್ಹವಿ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸಲು ಪ್ರಾರಂಭಿಸಿತು. ಹೀಗಾಗಿ ವಿದ್ಯಾರ್ಥಿನಿಯನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿ ಯಾಗದ ಹಿನ್ನಲೆ ಜಾನ್ಹವಿ ಮೃತಪಟ್ಟಿದ್ದಾರೆ.
ಡೆಂಗ್ಯೂ ಆತಂಕ ಹೆಚ್ಚಾಗ್ತಿರುವ ಹಿನ್ನಲೆ ಆರೋಗ್ಯ ಇಲಾಖೆಗೆ ಟೆನ್ಶನ್ ಹೆಚ್ಚಿಸಿದೆ. ಮುಂಜಾಗ್ರತಾ ದೃಷ್ಟಿಯಿಂದ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಘೀ ಜ್ವರ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲವಾದರೂ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಡೆಂಘಿ ರೋಗ ಲಕ್ಷಣಗಳೇನು..?
ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ತೀವ್ರ
ನೋವು
ತಲೆನೋವು, ಮೈ ಕೈ & ಕೀಲು ನೋವು, ವಾಕರಿಕೆ ಜೊತೆಗೆ ಹೊಟ್ಟೆ ನೋವು
ಬಾಯಿ, ಮೂಗು & ವಸಡುಗಳಲ್ಲಿ ರಕ್ತಸ್ರಾವದ ಗುರುತು
ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು
ವಿಪರೀತ ಬಾಯಾರಿಕೆ
ಜ್ಞಾನ ತಪ್ಪುವುದು
ರಕ್ತದ ಒತ್ತಡದ ಕುಸಿತ & ನಾಡಿ ಬಡಿತದ ಕುಸಿತದ ರೀತಿಯ ರೋಗ ಲಕ್ಷಣ ಕಂಡು ಬಂದ್ರೆ ಶೀಘ್ರವೇ ಆಸ್ಪತ್ರೆಗೆ ದಾಖಲಾಗಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.