Accident: ಮರಕ್ಕೆ ಕಾರು ಡಿಕ್ಕಿ: ಕಾರು ಎರಡು ತುಂಡು, ಓರ್ವ ಸಾವು.

ಧಾರವಾಡ: ಧಾರವಾಡ ತಾಲೂಕಿನ ಸೋಮಾಪುರ ಬಳಿ ವೇಗವಾಗಿ ಬಂದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಎರಡು ತುಂಡಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾರಿನ ರಭಸಕ್ಕೆ, ಕಾರಿನ ಎಂಜಿನ್ ಮತ್ತು ಚಕ್ರ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಚಾಲಕ ಸ್ಕೋಡಾ‌ ಕಾರು ತೆಗೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ಮೃತಪಟ್ಟ ಯುವಕ ಕೇಶ್ವಾಪೂರದ ನಿವಾಸಿ ಎಂದು ಹೇಳಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಧಾರವಾಡ ಗ್ರಾಮೀಣ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.

More News

You cannot copy content of this page