ಬೆಂಗಳೂರು: ಮೈತ್ರಿ ಕೂಟ ಅವರಿಗೆ ಲಾಭ ಕೊಡುವುದಕ್ಕಿಂತ ಹೆಚ್ಚಾಗಿ ಅಲ್ಲಿನವರಲ್ಲೇ ಅಸಮಾಧಾನಗಳನ್ನು ಹುಟ್ಟು ಹಾಕಿದೆ.
ಬಿಜೆಪಿ ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಲಾಭದಾಯಕವಾಗಲಿದೆ ಎಂದು ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು, ಪಕ್ಷದ ನೆಲೆಗಟ್ಟು ಹಾಗೂ ಸಿದ್ದಾಂತ ಒಪ್ಪಿ ಯಾರೇ ಬಂದರೂ ನಾವು ಸ್ವಾಗತಿಸುತ್ತೇವೆ. ಜಿಲ್ಲೆಯಮಟ್ಟಿಗೆ ಮೈತ್ರಿ ನಮಗೆ ಲಾಭವೇ ಆಗಲಿದೆ. ಮೈತ್ರಿಯಿಂದ ಪಕ್ಷಗಳಿಗೆ ಏನು ಲಾಭವಾಗತ್ತೋ ಗೊತ್ತಿಲ್ಲ. ಆದರೆ ಕುಮಾರಸ್ವಾಮಿಯವರಿಗಂತೂ ಲಾಭ ಆಗಿಯೇ ಆಗುತ್ತೆ. ಹಿಂದೊಮ್ಮೆ ಆದ ಮೈತ್ರಿ ವಿಚಾರ ಏನಾಗಿದೆ ಅನ್ನೊದು ಗೊತ್ತಿರುವ ವಿಚಾರ ಜನ ಈ ಬಗ್ಗೆ ಏನೆನ್ನುತ್ತಾರೋ ನೋಡೋಣ ಎಂದು ನಕ್ಕರು.

ರಾಜ್ಯದಲ್ಲಿನ ಬರದ ಕುರಿತು ಮಾತನಾಡಿದ ಅವರು, ಬರ ಹಾಗೂ ಮಳೆ ಕೊರತೆಯಿಂದ ರಾಜ್ಯದ ಶೇಕಡಾ 50% ರಷ್ಟು ಬೆಳೆ ಕಡಿಮೆ ಆಗಿದೆ. ಇಳುವರಿ ಕೊರತೆ ಆಗಿದೆ. ಬಹುಪಾಲು ಭತ್ತದ ಬೆಳೆಯ ಇಳುವರಿಯಲ್ಲಿ ಕೊರತೆ ಕಂಡಿದೆ. ಇಳುವರಿ ಹೊರತುಪಡಿಸಿ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಹಾಗೇನಾದರೂ ಸಮಸ್ಯೆಯಾದ್ರೆ, ಅದನ್ನು ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ನಮ್ಮ ಇಲಾಖೆ ಮುಂದೆ ಮೋಡ ಭಿತ್ತನೆ ಪ್ರಸ್ತಾಪ ಇಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಸ್ಪಷ್ಟನೆ ನೀಡಿದರು.
ರೈತ ಸಂಘಟನೆ ಪ್ರಮುಖರ ಜೊತೆಗೆ ಸಭೆ ನಡೆಸಿದ್ದೇನೆ.
ಹಾಲಿ ಪಡಿತರ ಅಕ್ಕಿ ಬದಲು ಪೂರಕ ಪೌಷ್ಠಿಕ ಆಹಾರಕ್ಕೆ ಮನವಿ ಮಾಡಿದ್ದಾರೆ. ೫ ಕೆಜಿ ಅಕ್ಕಿ ಜೊತೆ ರಾಗಿ,ಜೋಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಡಲೆಕಾಯಿ ಎಣ್ಣೆ ವಿತರಣೆ ಮಾಡಲು ಹೇಳಿದ್ದಾರೆ. ಸಿರಿಧಾನ್ಯ ಪ್ರೊತ್ಸಾಹ ಯೋಜನೆಯಡಿ ಖಾಯಂ ಮಾರುಕಟ್ಟೆಗೆ ಬೇಡಿಕೆ ಇದೆ.
ಬೃಹತ್ ಕಟಾವು ಹಬ್ ಸ್ಥಾಪನೆಗೆ ಸಿದ್ಧತೆ ನಡೆದಿದೆ.
ಈ ವರ್ಷ ೫೦ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
೧೦೦ ಹಬ್ ರಾಜ್ಯದಲ್ಲಿ ಸ್ಥಾಪನೆ ಆಗಲಿದೆ ಎಂದು ತಿಳಿಸಿದರು.