ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ತಮಿಳುನಾಡಿಗೆ ನೀರು ಬಿಟ್ಟಿಲ್ವೇ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಜೆಡಿಎಸ್ ಮತ್ತು ಬಿಜೆಪಿಗೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಹೋರಾಟ ಕೇವಲ ಲೋಕಸಭೆ ಚುನಾವಣೆ ದೃಷ್ಟಿಯಿಂದ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿಯ 25 ಸಂಸದರಿದ್ದಾರೆ, ನಿಮಗೆ ಚುನಾವಣೆ ಮುಖ್ಯ ಹೊರತು ನೀರು ಮುಖ್ಯ ಅಲ್ಲಾ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿಗಳು ಮಧ್ಯಸ್ಥಿಕೆಯಲ್ಲಿ ಕುಳಿಕು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ ಅವರು, ಪ್ರತಿಭಟನೆ ಮಾಡಲಿ, ಆದರೆ, ಬಿಜೆಪಿ ಮತ್ತು ಜೆಡಿಎಸ್ ಅನುಸರಿಸುತ್ತಿರುವ ದ್ವಂದ್ವ ನೀತಿ ಬಿಡಬೇಕು ಎಂದು ಆಗ್ರಹಿಸಿದರು.
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಗೋಸ್ಕರ ನೀರು ಬಿಟ್ಟಿಲ್ಲಾ ಎಂದು ಸ್ಪಷ್ಟಪಡಿಸಿದ ಅವರು, ಕಾವೇರಿ ಆದೇಶದಂತೆ ನೀರು ಬಿಡಲಾಗುತ್ತಿದೆ ಎಂದರು. ಯಾರ ಕಾಲದಲ್ಲಿ ನಿರ್ವಹಣಾ ಮಂಡಳಿ ರಚನೆಯಾಗಿತ್ತು ಎಂದು ಪ್ರಶ್ನಿಸಿದ ಅವರು, ಇವೆಲ್ಲಾ ವಿಚಾರ ಜನರಿಗೆ ತಿಳಿದಿದೆ ಎಂದರು.
ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದ ಅವರು, ಪಿಎಂ ಮಧ್ಯಸ್ಥಿಕೆ ವಿನಹ ಅನ್ಯ ಮಾರ್ಗವಿಲ್ಲ ಎಂದರು. ರಾಜಕೀಯ ಡ್ರಾಮ್ ಬಿಟ್ಟು ನೀರನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಮಾತನಾಡಲಿ ಎಂದು ಟೀಕಿಸಿದ ಅವರು, ಎರಡೂ ರಾಜ್ಯದ ಸಿಎಂ ಗಳ ಜೊತೆ ಕೂತು ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಮೈತ್ರಿ ಆದ ನಂತರ ಜಂಟಿ ಹೋರಾಟ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ತಪ್ಪು ತಿಳಿದುಕೊಂಡಿದ್ದಾರೆ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಅವರು ಮಾಡುತ್ತಿದ್ದಾರೆ, ಆದರೆ ಅದು ಸಾಧ್ಯವಾಗಲ್ಲಾ ಎಂದರು.