ಬೆಂಗಳೂರು: ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಪ್ರತಿಭಟನೆಯಲ್ಲಿ ಇಡೀ ಚಿತ್ರರಂಗ ಭಾಗಿಯಾಗಲಿದೆ ಎನ್ನಲಾಗಿದೆ.
ಕಾವೇರಿ ನದಿ ನೀರನ್ನು ಹರಿಸುವುದನ್ನ ವಿರೋಧಿಸಿ ಶುಕ್ರವಾರ ಕರೆ ಕೊಟ್ಟ ಬಂದ್ ಗೆ ಚಿತ್ರರಂಗ ಬೆಂಬಲ ನೀಡಲಿದೆ. ಬಂದ್‌ಗೆ ಬೆಂಬಲ ನೀಡಬೇಕು ಎಂದು ಫಿಲ್ಮ್ ಚೇಂಬರ್‌ಗೆ ತೆರಳಿ ಹೋರಾಟಗಾರ ವಾಟಾಳ್ ನಾಗರಾಜ್ ಬೇಡಿಕೆ ಇಟ್ಟಿದ್ದರು. ವಾಟಳ್ ನಾಗರಾಜ್ ಮನವಿ ಬೆನ್ನಲ್ಲೇ ಕರ್ನಾಟಕ ಬಂದ್‌ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಮ್ ಸುರೇಶ್ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಯಾರ ಬೆಂಬಲ..?
ಮಂಗಳವಾರ ನಡೆದ ಬಂದ್ ಗೆ ಹೋಟೆಲ್ ಅಸೋಸಿಯೇಷನ್, ಖಾಸಗಿ ವಾಹನ ಮಾಲೀಕರ ಸಂಘಟನೆಗಳು, ಒಲಾ ಊಬರ್ ಸಂಘಟನೆಗಳು ಕರ್ನಾಟಕ ಬಂದ್ ಗೆ ಸಪೋರ್ಟ್ ಮಾಡಿದ್ರು. ಶುಕ್ರವಾರ ನಡೆಯುವ ಬಂದ್ ಗೆ 104 ಸಂಘಟನೆಗಳು ಬೆಂಬಲ ಘೋಷಿಸಿಕೊಂಡಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್ ಗೆ ತಯಾರಿ ನಡೆಸುತ್ತಿದೆ.
ತಮಿಳುನಾಡು ಗಡಿ ರಸ್ತೆಗಳು ಬಂದ್
ಕರ್ನಾಟಕ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಮಿಳುನಾಡು ಗಡಿ ರಸ್ತೆಗಳನ್ನ ಬಂದ್ ಮಾಡಲು ಈಗಾಗಲೇ ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗಿದೆ.
ಆಂಧ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸೋ ಹೈವೇ ಬಂದ್ ಆಗಲಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಮೈಸೂರು- ಬೆಂಗಳೂರು ರಸ್ತೆ ಕೆಂಗೇರಿ ಬಳಿ ಬಂದ್ ಮಾಡಲಾಗುತ್ತದೆ. ಬೆಂಗಳೂರು- ಮಂಗಳೂರು ಹೈವೇ ನೆಲಮಂಗಲ ಜಂಕ್ಷನ್, ಬೆಂಗಳೂರು-ತುಮಕೂರು ಹೆದ್ದಾರಿ ನವಯುಗ ಟೋಲ್
, ಕನಕಪುರ- ಬೆಂಗಳೂರು ಹೆದ್ದಾರಿ ಕೋಣನಕುಂಟೆ ಬಳಿ ಬಂದ್ ಆಗಲಿದೆ. ಇದರ ಜೊತೆಗೆ ಮೈಸೂರು, ಮಂಡ್ಯ, ರಾಮನಗರ ಸೇರಿ ಪ್ರಮುಖ ಭಾಗದಲ್ಲಿ ಹೆದ್ದಾರಿ ತಡೆಗೆ ಪ್ಲಾನ್ ಮಾಡಿದ್ದು, ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನ ಬಂದ್ ಮಾಡೋ ಬಗ್ಗೆ ಚಿಂತನೆ ಇದೆ.