ISRAEL WAR: ಯುದ್ದಪೀಡಿತ ಇಸ್ರೇಲ್ ನಿಂದ ಕೆಲವು ಕನ್ನಡಿಗರ ಆಗಮನ: ಟಿ ಬಿ ಜಯಚಂದ್ರರಿಂದ ಆತ್ಮೀಯ ಸ್ವಾಗತ

ನವದೆಹಲಿ: ಯುದ್ದ ಪೀಡಿತ ಇಸ್ರೇಲ್ ದೇಶದಿಂದ ಸುರಕ್ಷಿತವಾಗಿ 212 ಭಾರತೀಯರಿದ್ದ ಮೊದಲ ವಿಮಾನ ಯಶಸ್ವಿಯಾಗಿ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇಸ್ರೇಲ್ ಪಟ್ಟಣದಲ್ಲಿ ನಡೆದ ಸರಣಿ ದಾಳಿಯಿಂದ ಅಲ್ಲಿ ಉದ್ವಿಗ್ನತೆ ಉಂಂಟಾಗಿದ್ದರಿಂದ ಸ್ವದೇಶಕ್ಕೆ ಮರಳುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಪ್ರಾರಂಭಿಸಿತ್ತು.
ಇದೇ ವಿಮಾನದಲ್ಲಿದ್ದ ಕನ್ನಡಿಗರನ್ನು ಕರ್ನಾಟಕ ಸರ್ಕಾರದ ಪರವಾಗಿ ಟಿ ಬಿ ಜಯಚಂದ್ರ ಅವರು ಆತ್ಮೀಯವಾಗಿ ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದರು.

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರರವರು ನವದೆಹಲಿಯಲ್ಲಿ ಕನ್ನಡಿಗರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಾವು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದೇವೆ. ಭಯಭೀತರಾಗಿದ್ದೆವು. ಭಾರತದ ರಾಯಭಾರ ಕಚೇರಿ ಮೂಲಕ ಎಲ್ಲಾ ವ್ಯವಸ್ಥೆಯನ್ನು ಪಡೆದುಕೊಂಡು ಹಿಂದಿರುಗಿದ್ದೇವೆ, ಎಂದು ವಾಪಾಸ್ಸಾದ ಕನ್ನಡಿಗರು ಸಂತಸ ವ್ಯಕ್ತಪಡಿಸಿದರು.

More News

You cannot copy content of this page