ಬೆಂಗಳೂರು : ತೀವ್ರ ಹತಾಶೆಗೆ ಒಳಗಾಗಿರುವ ಬಿಜೆಪಿಯಲ್ಲಿ ಆಪರೇಷನ್ ಮಾಡಲು ಒಂದು ಟೀಮ್ ಆಕ್ಟೀವ್ ಆಗಿರೋ ವಿಚಾರ ತಮಗೆ ತಿಳಿದಿದೆ. ನಮ್ಮ ಎಲ್ಲಾ ಎಂಎಲ್‌ಎ ಯಾರನ್ನು ಭೇಟಿ ಮಾಡಿದ್ದಾರೆ ಎನ್ನುವುದನ್ನು ನನಗೆ ಮತ್ತು ಸಿಎಂಗೆ ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿನ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಶಾಸಕರಿಗೆ ಏನು ಆಫರ್ ನೀಡುತ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅಸೆಂಬ್ಲಿ ನಡೆಯಲಿ ಯಾರೆಲ್ಲಾ ಮಾತನಾಡಿದ್ದಾರೆ, ಏನೆಲ್ಲಾ ಮಾತನಾಡಿದ್ದಾರೆ ಎಲ್ಲಾದ್ದನ್ನು ಅಲ್ಲಿ ಮಾತಾಡ್ತೀವಿ ಎಂದು ಹೇಳಿದ ಡಿ ಕೆ ಶಿವಕುಮಾರ್, ನಾನು ಇದಕ್ಕಿಂತ ಹೆಚ್ಚು ಹೇಳುವುದಿಲ್ಲ ಎಂದರು.
ಜಗದೀಶ್ ಶೆಟ್ಟರ್‌ನ ರಮೇಶ್ ಜಾರಕಿಹೊಳಿ ಭೇಟಿ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ಮಾಡಿರುವ ವಿಚಾರವಾಗಿ ಮಾತನಾಡಿದ ಡಿ ಕೆ ಶಿವಕುಮಾರ್, ಎಲ್ಲದರಲ್ಲೂ ಅನುಮಾನ ಪಡುವುದು ಸರಿಯಲ್ಲ ಎಂದರು.
ಪಾಪ ಬಿಜೆಪಿಯವರು ಡಿಸ್ಪರೇಷನ್‌ನಲ್ಲಿದ್ದಾರೆ, ಡೆಸ್ಪರೇಷನ್ ಬಿಜೆಪಿ ಮತ್ತು ಜನತಾದಳದವರಿಗೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ವೈದ್ಯರೇ ಸರ್ಜರಿ ಮಾಡದಂಷ್ಟು ಜಾಸ್ತಿ ಇದೆ ಎಂದರು. ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಗೆ ಬಂದು ಅವರ ಶಕ್ತಿ ಏನಿದೆ ಅಂತ ತೋರಿಸಿದ್ದಾರೆ ಎಂದರು.