MORE THAN 500 PEOPLE DEATH: ‘ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಸೇನೆ ದಾಳಿ: 500 ಸಾವು

ಗಾಜಾಪಟ್ಟಿ : ಇಲ್ಲಿನ ಗಾಜಾ ನಗರದಲ್ಲಿರುವ ಅಹ್ಲಿ ಅರಬ್ ಆಸ್ಪತ್ರೆಯೊಂದರ ಮೇಲೆ ಮಂಗಳವಾರ ಇಸ್ರೇಲ್ ನ ಸೇನೆ ವಾಯುದಾಳಿ ನಡೆಸಿದ ಪರಿಣಾಮ ಕನಿಷ್ಠ 500 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಗಾಯಾಳುಗಳು ಹಾಗೂ ಅನೇಕ ಸಾರ್ವಜನಿಕರು ಆಶ್ರಯ ಪಡೆದಿದ್ದರು ಎಂದು ಪ್ಯಾಲೇಸ್ಟೀನ್ ಆರೋಗ್ಯ ಸಚಿವವಾಲಯ ತಿಳಿಸಿದೆ ಎಂದು ವರದಿಯಾಗಿದೆ. ಗಾಜಾದ ಹಮಾಸ್ ಸರ್ಕಾರ ಇದು ಯುದ್ದ ಅಪರಾಧ ಎಂದು ಘೋಷಿಸಿದೆ. ಆಸ್ಪತ್ರೆಯ ಕಟ್ಟಡದ ಅವಶೇಷಗಳ ನಡುವೆ ನೂರಾರು ಜನರು ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಆಸ್ಪತ್ರೆಯಲ್ಲಿ ಗಾಯಗೊಂಡಿರುವ ಇತರ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದ್ದು, ದಾಳಿ ಬಳಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಅಕ್ಟೋಬರ್ 7 ರಿಂದ ಆರಂಭವಾಗಿರುವ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಸಂಘರ್ಷವು ಇದುವರೆಗೂ ಗಾಜಾ ಪಟ್ಟಿಯಲ್ಲಿ ಸುಮಾರು ಮೂರು ಸಾವಿರ ಜನರು ಮತ್ತು ಇಸ್ರೇಲ್ ನಲ್ಲಿ ಸುಮಾರು 1400 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಾಜಾದ ಆಸ್ಪತ್ರೆ ಮೇಲೆ ನಡೆದ ದಾಳಿಗೆ ನೂರರು ಜನರು ಬಲಿಯಾದ ಕೃತ್ಯವನ್ನು ಪ್ಯಾಲೇಸ್ಟೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಖಂಡಿಸಿದ್ದು, ಇದೊಂದು ಹತ್ಯಾಕಾಂಡ ಎಂದಿದ್ದಾರೆ. ಅಂತರರಾಷ್ಟ್ರೀಯ ಸಮುದಾಯ ತಕ್ಷಣವೇ ಈ ನರಮೇಧ ತಪ್ಪಿಸಲು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರಲ್ಲದೆ, ಮೂರು ದಿನ ಶೋಕ ಘೋಷಿಸಿದ್ದಾರೆ.

More News

You cannot copy content of this page