POWERFUL EARTHQUAKE IN NEPAL: ಪ್ರಬಲ ಭೂಕಂಪಕ್ಕೆ ನಲುಗಿದ ನೇಪಾಳ: ಸಾವಿನ ಸಂಖ್ಯೆ 128ಕ್ಕೆ ಏರಿಕೆ

ನೇಪಾಳ(ಕಠ್ಮಂಡು) : ಶುಕ್ರವಾರ ರಾತ್ರಿ ಸುಮಾರ್ 11.47ಕ್ಕೆ ಸಂಭವಿಸಿದ ಪ್ರಬಲ ಭೂಕಂಪಕ್ಕೆ ನೇಪಾಳ ದೇಶ ನಲುಗಿದ್ದು, ಸುಮಾರು 128 ಜನರು ಇದುವರೆಗೂ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ನೇಪಾಳದ ಗಡಿ ಭಾಗದಲ್ಲಿ ಈ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 6.4 ತೀವ್ರತೆಯನ್ನು ಹೊಂದಿತ್ತು ಎಂದು ಅಮೆರಿಕದ ಜಿಯೋಲಜಿಕಲ್ ಸರ್ವೆ ಇಲಾಖೆ ತಿಳಿಸಿದೆ. ಜಜಕೋರ್ಟ್ ನ ರಾಮಿದಂಡಾದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಸಾವು ನೋವಿಗೆ ಪ್ರಧಾನಿ ಪುಷ್ಪ ಕಮಲ್ ದಹಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿದವರ ರಕ್ಷಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ಭೂಕಂಪ ದೆಹಲಿಯೂ ಅನುಭವವಾಗಿದೆ. ಹಾಗೆಯೇ ಉತ್ತರಪ್ರದೇಶದ ಹಲವೆಡೆಯೂ ಅನುಭವವಾಗಿದ್ದು, ಅನೇಕರು ಭೂಮಿ ನಡುಗಿದಂತಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನೇಪಾಳದಲ್ಲಿ ಮೂರನೇ ಬಾರಿಗೆ ಪ್ರಬಲ ಭೂಕಂಪವಾಗುತ್ತಿದೆ.

More News

You cannot copy content of this page