FORMER CRICKTER RAVI SHASTRI: ಮಣಿಪುರ ಹಿಂಸಾಚಾರ ಮತ್ತು ಕುಸ್ತಿಪಟುಗಳ ಬಗ್ಗೆಯೂ ಮಾತನಾಡಿ: ಮೋದಿ ಅವರಿಗೆ ಅಭಿನಂದಿಸಿದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಗೆ ಎನ್ ಸಿಪಿ ಟೀಕೆ

ನವದೆಹಲಿ : ಮಧ್ಯಪ್ರದೇಶ, ರಾಜಾಸ್ತಾನ ಮತ್ತು ಛತ್ತೀಸ್ಗಢ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯನ್ನು ಅದರಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅಭಿನಂದಿಸಿದ್ದಾರೆ.
ರವಿಶಾಸ್ತ್ರಿ ಅವರು, ವಿಧಾನಸಭೆ ಚುನಾವಣೆ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಇದೊಂದು ಸಾಂಘಿಕ ಪ್ರಯತ್ನ, ಅದ್ಬುತ ಮತ್ತು ಬುಲ್ಡೋಜಿಂಗ್ ಪ್ರದರ್ಶನ ಎಂದು ಅಭಿನಂದಿಸಿದ್ದರು.

ರವಿಶಾಸ್ತ್ರಿಯವರ ಈ ಅಭಿನಂದನೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP), ಮಣಿಪುರದ ಹಿಂಸಾಚಾರ ಮತ್ತು ಮಹಿಳಾ ಕುಸ್ತಿಪಟುಗಳ ಹೋರಾಟದ ಕುರಿತು ಮಾತನಾಡಿ ಎಂದು ಆಗ್ರಹಿಸಿದೆ.
ಯಾವಾಗಲೂ ನೀವು ಟ್ರೇಸರ್ ಬುಲೆಟ್ ನಂತೆ ಮಾತನಾಡುತ್ತಿದ್ದೀರಿ, ಮಣಿಪುರದಲ್ಲಿ ಅನೇಕ ಅಮಾಯಕ ಜನರ ದೀವಗಳನ್ನು ಬಲಿ ತೆಗೆದುಕೊಂಡ ಬುಲೆಟ್ ಗಳ ಬಗ್ಗೆಯೂ ಸ್ವಲ್ಪ ಹೇಳಿ. ನಮ್ಮ ಮಹಿಳಾ ಕುಸ್ತಿಪಟುಗಳ ಹೋರಾಟ ಮತ್ತು ಬಿಜೆಪಿ ಸಂಸದನಿಂದ ನ್ಯಾಯ ಬಯಸುತ್ತಿರುವ ಮಹಿಳಾ ಕುಸ್ತಿಪಟುಗಳು ಸಂಕಷ್ಟದ ಬಗ್ಗೆಯೂ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಎನ್ ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೋ ಕಿಡಿಕಾರಿದ್ದಾರೆ.

More News

You cannot copy content of this page