SEEN CREATED BY HIMSELF: ಚಾಕು ಹಾಕಿದ್ದರೆ ಶರ್ಟ್ ಹರಿಯುತ್ತಿರಲಿಲ್ಲವೇ..? ರಮೇಶ್ ಜಾರಕಿಹೊಳಿ ಆಪ್ತನ ಹಲ್ಲೆ ವಿಚಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ: ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ

ಬೆಂಗಳೂರು : ಶಾಸಕ ರಮೇಶ್ ಜಾರಕಿಹೊಳಿ ಆಪ್ತನ ಮೇಲೆ ಹಲ್ಲೆ ವಿಚಾರಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪಿಎ ಅಲ್ಲಿಗೆ ಹೋಗಿದ್ದು ನಿಜ, ಆದರೆ ಹಲ್ಲೆ ಮಾಡಿದ್ದಾರೆ ಅನ್ನೋದು ಸುಳ್ಳು, ನನ್ನ ಪಿಎ ಐಡಿ ಹಾಕಿಕೊಂಡೇ ಹೋಗಿದ್ದಾನೆ, ಅವನ ಹತ್ತಿರ ನಗ್ತಾ ಮಾತನಾಡಿದ್ದಾರೆ, ಹಲ್ಲೆ ಮಾಡುವವರು ಹಾಗೆ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಅವನೇ ನಮ್ಮವರನ್ನ ಅಲ್ಲಿಗೆ ಕರೆಸಿಕೊಂಡಿದ್ದಾನೆ, ಆಮೇಲೆ ಇಷ್ಟೆಲ್ಲಾ ಸೀನ್ ಕ್ರಿಯೇಟ್ ಮಾಡಿದ್ದಾನೆ ಎಂದು ಆರೋಪಿಸಿದ ಅವರು, ಚಾಕು ಹಾಕಿದ್ರೆ ಶರ್ಟ್ ಹರಿಯುತ್ತಿರಲಿಲ್ವೇ? ಹಾಕಿರುವ ಶರ್ಟ್ ಏನೂ ‌ಆಗಿಲ್ಲ, ಜೇಬು ಮಾತ್ರ ಹರಿದಿದೆ, ಅವರೇ ಸೀನ್ ಕ್ರಿಯೇಟ್ ಮಾಡಿದ್ದಾರೆ ಎಂದು ಹಲ್ಲೆಯ ಬಗ್ಗೆ ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದಾರೆ.

More News

You cannot copy content of this page