YASH 19: ಸಾಯಿ ಪಲ್ಲವಿ- ಯಶ್ ನಟನೆ.?!: ಮತ್ತೊಂದು ಹಿಟ್ ಸಿನ್ಮಾ ಸುಳಿವು ಕೊಟ್ಟ ಆ ಪೋಸ್ಟರ್..

ಬೆಂಗಳೂರು: ನಟ ಯಶ್ ತಮ್ಮ ಕೆಜಿಎಫ್ ೨ ಸಿನಿಮಾ ಯಶಸ್ಸಿನ ಬಳಿಕ ಗ್ಯಾಪ್ ಪಡೆದಿದ್ದರು. ಇದೀಗ ಒಂದೂವರೆ ವರ್ಷದ ಮರಳಿ ಬಣ್ಣ ಹಚ್ಚುತ್ತಿದ್ದಾರೆ.

ಯಶ್ ೧೯ ನೇ ಸಿನಿಮಾಗೆ ನಾಯಕಿಯಾಗಿ ಯಾರು ಜತೆಯಾಗಲಿದ್ದಾರೆ ಎಂಬ ಚರ್ಚೆ ಶುರುವಾಗಿದ್ದು, ನಟಿ ಸಾಯಿಪಲ್ಲವಿ ಹೆಸರು ಕೇಳಿಬರುತ್ತಿದೆ. ಈಗಾಗಲೇ ‘ಯಶ್ 19’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಡಿಸೆಂಬರ್ 8ರಂದು ಸಿನಿಮಾ ಟೈಟಲ್ ರಿವೀಲ್ ಆಗಲಿದೆ ಎಂದು ತಂಡ ಈಗಾಗಲೇ ಘೋಷಣೆ ಮಾಡಿದ್ದು, ಸಿನಿ ಅಂಗಳದಲ್ಲಿ ಸದ್ದು ಮಾಡ್ತಿದೆ.

ಈ ಹಿಂದೆ ನಟ ಯಶ್ ಅವರು ತಮ್ಮ ಪ್ರೋಫೈಲ್ ಫೋಟೋನ ‘ಲೋಡಿಂಗ್​’ ಎಂದು ಬದಲಿಸಿದ್ದರು. ಡಿ. 8ರ ಬೆಳಿಗ್ಗೆ 9:55ಕ್ಕೆ ಟೈಟಲ್ ರಿವೀಲ್ ಆಗಲಿದ್ದು, ಹೊಸ ಸಿನಿಮಾದ ಲುಕ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ‘ಯಶ್ 19’ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ ಎಂಬ ವಿಚಾರ ಸದ್ದು ಮಾಡುತ್ತಿದೆ.

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಕಳೆದ ವರ್ಷ ಏಪ್ರಿಲ್​ನಲ್ಲಿ ರಿಲೀಸ್ ಆಗಿ ಎಲ್ಲೆಡೆ ಸದ್ದು ಮಾಡಿತ್ತು. ಈ ಸಿನಿಮಾ ಬಳಿಕ ಅವರು ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ನೂತನ ಚಿತ್ರಕ್ಕಾಗಿ ಸಾಕಷ್ಟು ಹೋಮ್​ವರ್ಕ್ ನಡೆಸಿದ್ದಾರೆ ಯಶ್.
‘ಯಶ್ 19’ ಚಿತ್ರಕ್ಕೆ ಲೇಡಿ ಡೈರೆಕ್ಟರ್ ನಿರ್ದೇಶನ ಮಾಡಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಲಯಾಳಂ ಬ್ಯೂಟಿಯ ಆಗಮನವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ನಟಿ ಸಾಯಿ ಪಲ್ಲವಿ ‘ಪ್ರೇಮಂ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಈ ಸಿನಿಮಾ ಯಶಸ್ಸು ಕಂಡಿತು. ಆ ಬಳಿಕ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಸಾಯಿ ಪಲ್ಲವಿ ಅವರು ಕನ್ನಡದ ಸಿನಿಮಾದಲ್ಲಿ ಇನ್ನೂ ನಟಿಸಿಲ್ಲ. ‘ಯಶ್ 19’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಲ್ಲಿ ಸ್ಯಾಂಡಲ್​ವುಡ್​ನಲ್ಲೂ ಸಾಯಿ ಪಲ್ಲವಿ ತಮ್ಮ ನಟನೆ ಮೂಲಕ ಕಮಾಲ್ ಮಾಡೋದ್ರಲ್ಲಿ ಎರಡು ಮಾತಿಲ್ಲ.

ಸದ್ಯ ಡಿಸೆಂಬರ್ 8ರಂದು ಈ ಬಗ್ಗೆ ಘೋಷಣೆ ಆಗಲಿದೆ.
ಈ ಸಿನಿಮಾದ ಕಥೆ ಗೋವಾದಲ್ಲಿ ಸಾಗಲಿದೆ. ಡ್ರಗ್ ಮಾಫಿಯಾ ಕಥೆಯನ್ನು ಸಿನಿಮಾ ಹೊಂದಿರಲಿದೆ‌ ಎನ್ನಲಾಗಿದೆ. ಯಶ್ ೧೯ನೇ ಸಿನಿಮಾ ಕೆಜಿಎಫ್ ಚಿತ್ರದಂತೆ ಹಿಟ್ ಆಗಲಿದ್ಯಾ ಕಾದು ನೋಡಬೇಕಿದೆ.

More News

You cannot copy content of this page