ಬೆಂಗಳೂರು : ಮಚ್ಚು ಲಾಂಗ್ ಹಿಡ್ಕೊಂಡು ನಡು ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಯುವಕರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ತರ ಲಾಂಗ್ ಮಚ್ಚು ಹಿಡ್ಕೊಂಡು ಹೋಗುವಷ್ಟು ಸ್ವತಂತ್ರ ಕೊಟ್ಟ ನಮ್ಮ ಹೆಮ್ಮೆಯ ಕರ್ನಾಟಕ ಪೊಲೀಸರು ಎಂದು ಕ್ಯಾಪ್ಶನ್ ಬರೆದು ವೀಡಿಯೋ ಪೋಸ್ಟ್ ಮಾಡಿ ತಮ್ಮ ಅಸಮಾಧಾನ, ಆಕ್ರೋಶವನ್ನು ಸಾರ್ವಜನಿಕರು ಹೊರಹಾಕಿದ್ದಾರೆ.
KA 05 KJ 4524
— SANDEEP (@SandeepBus94478) December 20, 2023
Wheeling with a knife and breaking the rules constantly with a fine due of 21000 @BlrCityPolice @CPBlr @viveknagarps @blrcitytraffic pic.twitter.com/qLG4MvMnw5
ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಭಯಾನಕ ವೀಲ್ಹಿಂಗ್ ಮಾಡಿ ರೀಲ್ಸ್ ಅಪ್ಲೋಡ್ ಮಾಡಿದ್ದಾನೆ. ಆ ವೀಡಿಯೋವನ್ನು ಡಿಲೀಟ್ ಮಾಡಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ವಾಹನದ ಮೇಲೆ ಬರೋಬ್ಬರಿ 21 ಸಾವಿರ ರೂಪಾಯಿ ದಂಡ
ಈ ವ್ಯಕ್ತಿ ಬಳಸುತ್ತಿರುವ ದ್ವಿಚಕ್ರ ವಾಹನದ ಮೇಲಿದೆ ಬರೋಬ್ಬರಿ 21 ಸಾವಿರ ರೂಪಾಯಿ ದಂಡ, ಇದು ಸಂಚಾರಿ ನಿಯಮ ಉಲ್ಲಂಘನೆಯ ದಂಡವಾಗಿದೆ. ಹಾಗೆಯೇ ಕೈಯಲ್ಲಿ ಲಾಂಗ್ ಹಿಡ್ಕೊಂಡು ವೀಡಿಯೋ ಮಾಡಿದ್ದ ಕೇಸ್ ಬೇರೆ ದಾಖಲು ಮಾಡಿಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ವಿಡಿಯೋ ಮಾಡಿದ ವ್ಯಕ್ತಿ ಬಳಿಕ ತನ್ನ ಇನ್ಸ್ ಸ್ಟಾ ಗ್ರಾಂ ಪೇಜ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿದ್ದಾನೆ. ಈತನ ದ್ವಿಚಕ್ರ ವಾಹನದ ಮೇಲಿದೆ ಬರೋಬ್ಬರಿ 39 ಭಾರೀ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್ ಗಳು. ಪೊಲೀಸರು ಆದಷ್ಟು ಬೇಗನೇ ಈತನನ್ನು ಬಂಧಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ