ಬೆಂಗಳೂರು: ದಿವಂಗತ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಅವರ ಕುಟುಂಬ ನಿರ್ಧಾರ ಮಾಡಲಿ ಎಂದು ಖ್ಯಾತ ನಟ ಶಿವರಾಜ್ ಕುಮಾರ್ ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಗುರುವಾರ ಮಾತನಾಡಿದ ಅವರು, ವಿಷ್ಣು ಸ್ಮಾರಕ ವಿವಾದ ವಿಚಾರವಾಗಿ ಮಾತನಾಡಿ, ಮೊದಲು ಈ ಬಗ್ಗೆ ಅವರ ಕುಟುಂಬ ನಿರ್ಧಾರ ತೆಗೆದುಕೊಳ್ಳಬೇಕು. ವಿಷ್ಣು ಸರ್ ಮೇಲೆ ಪ್ರೀತಿ ಎಲ್ಲರಿಗೂ ಇದೆ ಎಂದರು.
ಭಾರತಿ ಅಮ್ಮ ಇದ್ದಾರೆ, ವಿಷ್ಣುವರ್ಧನ್ ಅಳಿಯ ಇದ್ದಾರೆ. ಈ ವಿಚಾರವಾಗಿ ಅವರು ಮೊದಲು ತೀರ್ಮಾನ ಮಾಡಲಿ. ಅಭಿಮಾನಿಗಳು ಹೇಳ್ತಾರೆ. ಆದರೆ ಅವರ ಕುಟುಂಬ ತೀರ್ಮಾನ ಮುಖ್ಯ ಎಂದರು.
ನಮಗೂ ವಿಷ್ಟು ಸರ್ ಮೇಲೆ ಪ್ರೀತಿ ಇದೆ. 1974 ರಿಂದ ಅವರ ಕೈ ಹಿಡಿದುಕೊಂಡು ಓಡಾದಿದ್ದೇನೆ ನಾನು. ಅಭಿಮಾನಿಗಳು ಚಿಂತೆ ಮಾಡೋದು ಬೇಡ. ಅವರ ಸ್ಮಾರಕ ಆಗಬೇಕು ಅಂದರೆ ಆಗೇ ಆಗುತ್ತದೆ ಎಂದು ಹೇಳಿದರು.
ಈ ವಿಚಾರವಾಗಿ ಮೊದಲು ಅವರ ಕುಟುಂಬ ನಿರ್ಧಾರ ಮಾಡಿದ ನಂತರ ಮುಂದಿನದು ಆಗುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ನಂದಿನಿ ಉತ್ಪನ್ನ ಬಿಡುಗಡೆ ಮಾಡಿದ ಶಿವಕುಮಾರ್
ನಂದಿನಿ ನೂತನ ಉತ್ಪನ್ನಗಳನ್ನು ನಟ ಶಿವಕುಮಾರ್ ಬಿಡುಗಡೆ ಮಾಡಿದೆ. ಬಳಿಕ ಮಾತನಾಡಿ, ನಂದಿನಿ ಉತ್ಪನ್ನಗಳು ಚೆನ್ನಾಗಿ ಇವೆ.
ಟೀಜರ್ ಕೂಡಾ ಬಿಡುಗಡೆ ಮಾಡಲಾಯ್ತು. ತಕ್ಕ ಮಟ್ಟಿಗೆ ಟೀಜನಲ್ಲಿ ಮಾಡಿದ್ದೇನೆ. ಖುಷಿ ಆಗ್ತಿದೆ ಎಂದರು. KCC ಗೂ ಸಿಎಂಗೆ ಆಹ್ವಾನ ನೀಡಿದ್ದೇನೆ. ಕ್ರಿಸ್ ಮಸ್ ದಿನ ಸಿಎಂ ಬರೋಕೆ ಆಹ್ವಾನ ನೀಡಿದ್ದೇನೆ ಎಂದರು.