DEROGATORY WRITING AGAINST INDIA IN CALIFORNIA: ಅಮೆರಿಕಾದ ಹಿಂದೂ ದೇಗುಲದಲ್ಲಿ ಇಂಡಿಯಾ ಮತ್ತು ಪ್ರಧಾನಮಂತ್ರಿ ಮೋದಿ ವಿರುದ್ಧ ಬರಹ

ಕ್ಯಾಲಿಫೋರ್ನಿಯಾ : ಅಮೆರಿಕದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದ ಸ್ವಾಮಿ ನಾರಾಯಣ ದೇಗುಲದ ಗೋಡೆ ಮೇಲೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಬರೆಯಲಾಗಿದೆ. ಹಾಗೆಯೇ ಇಲ್ಲಿ ಖಾಲಿಸ್ತಾನ ಪರ ಘೋಷಣೆಗಳನ್ನು ಬರೆಯಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ಅಶ್ಲೀಲ ಭಾಷೆಯನ್ನು ಇಲ್ಲಿ ಬಳಸಲಾಗಿದ್ದು, ಶಹೀದ್ ಛಿಂದ್ರನ್ ವಾಲೆ ಎಂದು ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ.

ದೇಗುಲದ ಗೋಡೆಗಳ ಮೇಲೆ ಬರೆಯಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಭಾರತೀಯರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಕರಣ ಸಂಬಂಧ ನೆವಾರ್ಕ್ ಪೊಲೀಸರು ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕಾದ ಹಿಂದೂ ಅಮೆರಿಕನ್ ಫೌಂಡೇಶನ್ ಈ ಕುರಿತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿರುವ ಸ್ವಾಮಿ ನಾರಾಯಣ ಮಂದಿರದ ವಾಸನ ದೇಗುಲದಲ್ಲಿ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇದೊಂದು ದ್ವೇಷದ ಅಪರಾಧ ಎಂದು ಬರೆದುಕೊಂಡಿದೆ.

ಭಯೋತ್ಪಾದಕ ಕಿಂಗ್ ಪಿನ್ ಛಿಂದನ್ ವಾಲೆ ಹೆಸರನ್ನು ಬರೆದಿರುವುದು ದೇವಸ್ಥಾನಕ್ಕೆ ಬರುವವರಿಗೆ ಆಘಾತವನ್ನುಂಟು ಮಾಡಲು ಮತ್ತು ಹಿಂಸೆಯ ಭಯವನ್ನು ಸೃಷ್ಟಿಸಲು ಯೋಜಿಸಲಾಗಿದೆ ಎಂದು ಫೌಂಡೇಶನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.

More News

You cannot copy content of this page