ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ಅವರ ಮೇಲೆ ಸಾಲು, ಸಾಲು ಆರೋಪ ಮಾಡಿರುವ ಮಾಜಿ ಪ್ರೇಯಸಿ, ಕಾರಿಯಪ್ಪ ಡ್ರಗ್ಸ್, ಗಾಂಜಾ ಸೇವನೆ ಮಾಡ್ತಾರೆ ಎಂದಿದ್ದು, ಯುವ ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ಅವರಿಗೆ ಕಾನೂನು ತೊಡಕು ಎದುರಾಗಿದೆ.
ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್ ಸ್ಟೋರಿ ನಿನ್ನೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕೆಸಿ ಕಾರಿಯಪ್ಪ ಹಾಗೂ ಮಾಜಿ ಪ್ರಿಯತಮೆಯಿಂದ ಪ್ರತ್ಯೇಕ ದೂರು ದಾಖಲಾಗಿತ್ತು.
ಕೆಸಿ ಕಾರಿಯಪ್ಪ ರಿಂದ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ದಾಖಲಾದ್ರೆ, ಕಾರಿಯಪ್ಪ ಮಾಜಿ ಪ್ರಿಯತಮೆಯಿಂದ ಆರ್ ಟಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂದು ಕಾರಿಯಪ್ಪ ವಿರುದ್ದ ಮಾಜಿ ಪ್ರಿಯತಮೆ ದೂರು ನೀಡಿದರೆ, ಒಂದೂವರೆ ವರ್ಷದ ಹಿಂದೆ ಬ್ರೇಕ್ ಅಪ್ ಮಾಡಿಕೊಂಡಿದ್ದೇನೆ. ಆಕೆ ಅಭ್ಯಾಸಗಳು ಸರಿ ಇಲ್ಲ, ಈಗ ನನ್ನ ಕ್ರಿಕೆಟ್ ಭವಿಷ್ಯ ಹಾಳು ಮಾಡುತ್ತೇನೆ ಎಂದು ಗಲಾಟೆ ಮಾಡುತ್ತಿದ್ದಾಳೆ. ಮನೆ ಬಳಿ ಬಂದು ಗಲಾಟೆ ಮಾಡುತ್ತಾಳೆ ಎಂದು ಕಾರಿಯಪ್ಪ ದೂರು ನೀಡಿದ್ದಾರೆ. ಸದ್ಯ ಎರಡು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದ್ದು, ವಿಚಾರಣೆ ನಡೆಸಲಾಗ್ತಿದೆ.

ಇದರ ನಡುವೆ ಯುವತಿ ದೂರು ನೀಡುವ ವೇಳೆ ಕಾರಿಯಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾನು ಬಿಯರ್ ತೆಗೆದುಕೊಳ್ಳುತ್ತೇನೆ. ಆದ್ರೆ ಕಾರಿಯಪ್ಪ ಡ್ರಗ್ಸ್, ಗಾಂಜಾ ಸೇವನೆ ಮಾಡ್ತಾರೆ ಎಂದು ದೂರಿದ್ದು, ಯಾವುದೇ ಕ್ಷಣದಲ್ಲಿ ಬೇಕಾದ್ರೂ ಕೆಸಿ ಕಾರಿಯಪ್ಪಗೆ Nada ಪರೀಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಕ್ರಿಕೆಟಿಗ ಕಾರಿಯಪ್ಪ ವಿರುದ್ಧ ಡ್ರಗ್ಸ್ ಆರೋಪ ಹಿನ್ನಲೆಯಲ್ಲಿ ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಸಂಸ್ಥೆ (Nada) ಯಾವುದೇ ಕ್ಷಣದಲ್ಲಾದರೂ ಪರೀಕ್ಷೆಗೆ ಒಳಪಡಿಸಬಹುದಾದ ಅಧಿಕಾವಿದೆ. ಹೀಗಾಗಿ ಕರ್ನಾಟಕ ರಣಜಿ ತಂಡದ ಆಟಗಾರನಾಗಿರುವ ಕೆ.ಸಿ ಕಾರಿಯಪ್ಪ ಅವರಿಗೂ ಶೀಘ್ರವೇ Nada ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಇನ್ನು ಕಾರಿಯಪ್ಪ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಗೆ ತನಿಖೆಗೆ ಹಾಜರಾಗುವಂತೆ ಇಂದು ನೋಟಿಸ್ ನೀಡಿದ್ದಾರೆ. ತನಿಖೆ ವೇಳೆ ಮತ್ತಷ್ಟು ಡ್ರಗ್ಸ್ ಕುರಿತ ಮಾಹಿತಿ ಹೊರ ಬರುವ ಸಾಧ್ಯತೆಯೂ ಇದೆ.