ಬೆಂಗಳೂರು: ಮನೆಯೊಂದು ಸಾಕಷ್ಟು ಬಾಗಿಲು.. ಸಧ್ಯ ರಾಜ್ಯ ಬಿಜೆಪಿಯ ಸ್ಥಿತಿ ಇದು. ಬಹಿರಂಗವಾಗಿ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸ್ತಿರುವ ಶಾಸಕ ಯತ್ನಾಳ್ ರ ದಿನಕ್ಕೊಂದು ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರೂ ಕಂಗಾಲಾಗಿ ಹೋಗಿದ್ದಾರೆ. ಆಡಳಿತ ಪಕ್ಷದ ಎದುರು ತೀವ್ರ ಮುಖಬಂಗ ಅನುಭವಿಸ್ತಿದ್ದು, ಪಕ್ಷದೊಳಗಿನ ಅಂತಃ ಕಲಹ ಸದ್ಯಕ್ಕೆ ನಿಲ್ಲುವ ಲಕ್ಷಣ ಇಲ್ಲ..
ಇತ್ತ ಮೋದಿ ಮುಂದಿನ ಪ್ರಧಾನಿ ಆಗಬೇಕು ಎಂದು ಹೇಳುತ್ತಲೇ ಸ್ವಪಕ್ಷೀಯ ನಾಯಕರ ವಿರುದ್ಧವೇ ಬಂಡಾಯ ಸಾರಿರುವ ಯತ್ನಾಳ್ ನಡೆಗೆ ರಾಜ್ಯ ಬಿಜೆಪಿ ಮುಜುಗರಕ್ಕೆ ಈಡಾಗಿದೆ. ಅತ್ತ ಕೇಂದ್ರ ನಾಯಕರ ದೀರ್ಘ ಮೌನದ ಕುರಿತು ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸದಾನಂದಗೌಡ, ಯತ್ನಾಳ್ ಬಗ್ಗೆ ಹೈಕಮಾಂಡ್ ನಾಯಕರಿಗೆ ತಿಳಿಸಿದ ಬಗ್ಗೆ ಇಂದು ಮಾತನಾಡಿದ್ದಾರೆ.
ಯತ್ನಾಳ್ ಮೇಲೆ ಕ್ರಮ ವಿಚಾರದ ಕುರಿತು ಬೆಂಗಳೂರಲ್ಲಿ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ,
ನಿನ್ನೆ ಸಭೆಯಲ್ಲಿ ಏನಾಗಿದೆ ಅಂತ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯತ್ನಾಳ್ ವಿಚಾರ ಹೈಕಮಾಂಡ್‌ಗೆ ತಿಳಿಸಿದ್ದೇವೆ.ನಾವು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಕೇಂದ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು
ಕಾಂಗ್ರೆಸ್ ನವರೇ ಏನು ಕ್ರಮ ತೆಗೆದುಕೊಳ್ಳಬೇಕು ತಗೊಳ್ಳಲಿ.ಅವರೇ ಅಧಿಕಾರದಲ್ಲಿದ್ದಾರೆ.ದಂಡ ಪ್ರಯೋಗ, ಕಾರ್ಯಕರ್ತರನ್ನ ಕಟ್ಟಿಹಾಕುವ ಕೆಲಸ ಮಾಡ್ತಿದ್ದಾರೆ.
ರಾಜ್ಯದಲ್ಲಿ ಹೊಸ ತಂಡ ಬರಲಿದೆ. ನಮ್ಮನ್ನ ಯಾರು ಎದುರಿಸ್ತಾರೆ ನೋಡೋಣ ಎಂದು ಸವಾಲು ಹಾಕಿದರು.
ಇದೇ ವೇಳೆ ಮಾತನಾಡಿದ ಅವರು, ನೂರಾರು ತಪ್ಪಾಗಳಾದ ಹಿನ್ನಲೆ ನಾವು ಸದೃಢ ಆಗಿದ್ದೇವೆ.
ಕೇಂದ್ರದವರು ನಮ್ಮಒತ್ತಡಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ. ಸಲಹೆ ಸೂಚನೆ ಕೊಡೋದು ನಮ್ಮ ಜವಾಬ್ದಾರಿ. ಪದಾಧಿಕಾರಿಗಳ ಪಟ್ಟಿ ಶೀಘ್ರವೇ ಕಳಿಸಿ ಅಂತ ಮನವಿ ಮಾಡಲಾಗಿತ್ತು. ಕೆಲವರ ಅಭಿಪ್ರಾಯ ಪಡೆದು ಕಳಿಸಿದ್ದಾರೆ. ಕೆಳ ಹಂತದಲ್ಲಿ ಕೂಡ ಸಹಮತ ನೀಡುವಂತೆ ಆಗಬೇಕು ಎಂದರು..

ಈಗಾಗಲೇ ನಮ್ಮ ಸಂಘಟನಾ ಪ್ರಕ್ರಿಯೆ ರಾಜ್ಯಾಧ್ಯಂತ ವೇಗವಾಗಿ ಬೆಳೆಯುತ್ತಿದೆ. ನಿನ್ನೆ ಕೋರ್ ಕಮಿಟಿ, ಹಿರಿಯರ ಸಮಾಲೋಚನೆ ಸಭೆ ನಡೆಯಿತು. ಸಮಾಲೋಚನೆ ಮೂಲಕವೇ ಸಂಘಟನೆ ಮಾಡಲು ನಿರ್ಧಾರ ಮಾಡಲಾಗಿದೆ. ಗ್ರೌಂಡ್ ರಿಯಾಲಿಟಿ ತಿಳಿದು ಕೆಲಸ ಮಾಡುವ ತೀರ್ಮಾನ ಆಗಿದೆ.. ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಎಲ್ಲರ ಅಭಿಪ್ರಾಯ ತಿಳಿದು ಮುನ್ನಡೆಯಲು ನಿರ್ಧಾರ ಮಾಡಲಾಗಿದೆ.ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯುತ್ತಿದ್ದು.ಉತ್ತರ ಲೋಕಸಭಾ ಕ್ಷೇತ್ರ, ಯಲಹಂಕ ಸೇರಿ ಹತ್ತು ಮಂಡಲ ಬರಲಿದೆ. ಹತ್ತರಲ್ಲಿ ಆರು ಜನ ನಮ್ಮ ವಿಧಾನಸಭೆ ಸದಸ್ಯರಿದ್ದಾರೆ.ದಾಸರಹಳ್ಳಿ ಮತ್ತೆ ಪಡೆದಿದ್ದೇವೆ.
ಹೆಬ್ಬಾಳ, ಬ್ಯಾಟರಾಯನಪುರದಲ್ಲಿ ಅಲ್ಪ ಮತಗಳಿಂದ ಸೋತಿದ್ದೇವೆ.ಸಮಸ್ಯೆಗಳನ್ನ ಸರಿದೂಗಿಸೋ ಕೆಲಸ ಮಾಡಬೇಕು. ಪುಲಕೇಶಿ ನಗರದಲ್ಲಿ ಸ್ವಲ್ಪ ಹಿನ್ನೆಡೆ ಇರೋ ಕ್ಷೇತ್ರ. ಎಲ್ಲವನ್ನೂ ಸರಿದೂಗಿಸಿ ಸಹಮತದಿಂದ ಜಿಲ್ಲಾಧ್ಯಕ್ಷರ ಆಯ್ಕೆ ಆಗಬೇಕು. ಯಾರು ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರ ಎಲ್ಲರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಇದು ಫಲಪ್ರದ ಆಗಲಿದೆ ಅಂತ ಬಾವಿಸಿದ್ದೇನೆ ಎಂದು ತಿಳಿಸಿದರು.
ಇನ್ನು ಉತ್ತರ ಲೋಕಸಭಾ ಕ್ಷೇತ್ರ ಸ್ಪರ್ಧೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಎಲ್ಲರೂ ಸದಾನಂದ ಗೌಡ್ರೆ ನೀವೇ ನಿಲ್ಲಿ ಅಂತ ಹೇಳಿದ್ದಾರೆ. ನನ್ನ ಮೇಲೆ ಅವರಿಗೆ ವಿಶ್ವಾಸ ಇದೆ, ಹಾಗಾಗಿ ಹೇಳಿದ್ದಾರೆ ಎಂದು ಹೇಳುವ ಮೂಲಕ ಚುನಾವಣೆ ನಿಲ್ಲೋದ್ರ ಬಗ್ಗೆ ಖಚಿತಪಡಿಸಿದರು.