ಕೋವಿಡ್ ಸಮಯದಲ್ಲಿ ನಮ್ಮ ಪಕ್ಷದಲ್ಲೇ ದೊಡ್ಡ ಹಗರಣ ನಡೆದಿದೆ ಎಂದು ಬಾಂಬ್ ಒಂದನ್ನ ಸಿಡಿಸಿದ ಶಾಸಕ ಯತ್ನಾಳ್ ವಿರುದ್ಧ ಯಾವ ಹೇಳಿಕೆಯೂ ನೀಡದಿರಲು ರಾಜ್ಯ ಬಿಜೆಪಿ ನಿರ್ಧರಿಸಿದೆ.
ಯತ್ನಾಳ್ ಹೇಳಿಕೆಯಿಂದ ಬಿಜೆಪಿಗೆ ಡ್ಯಾಮೇಜ್ ಆಗ್ತಿರೋ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಲು ಮಾಜಿ ಡಿಸಿಎಂ ಕಾರಜೋಳ ನಿರಾಕರಿಸಿದ್ದಾರೆ. ಯತ್ನಾಳ್ ಹೇಳಿಕೆ ಕುರಿತು ಪ್ರಶ್ನೆ ಮಾಡುತ್ತಿದ್ದಂತೇ, ಯತ್ನಾಳ್ ಹೇಳಿಕೆ ಕುರಿತು ಏನನ್ನೂ ಮಾತನಾಡಲ್ಲ. ಅದನ್ನು ಕ್ಲೋಸ್ ಮಾಡಿದ್ದೇವೆ.
ಎಂದಿದ್ದಾರೆ. ನಾವು ನಿನ್ನೆ ಬೆಂಗಳೂರಲ್ಲಿ ಚರ್ಚಿಸಿದ್ದೇವೆ. ನಮ್ಮ ಗುರಿ ಏನಿದ್ದರೂ ಮುಂದಿನ ಲೋಕಸಭಾ ಚುನಾವಣೆ. ಪ್ರಧಾನಿ ಮೋದಿ ಮಾಡಿರುವ ಯೋಜನೆಗಳ ಬಗ್ಗೆ ತಿಳಿಸಿ ಹೇಳೋದು. ನಮ್ಮ ಸರ್ಕಾರ ಕೊಟ್ಟ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಮುಳಗೋ ಹಡಗು, ಮುಳುಗೋ ಹಡಗಿಗೆ ಖರ್ಗೆ ನಾಯಕ: ಗೋವಿಂದ ಕಾರಜೋಳ
ಕಾಂಗ್ರೆಸ್ ಮುಳಗೋ ಹಡಗು, ಮುಳುಗೋ ಹಡಗಿಗೆ ಖರ್ಗೆ ಅವರನ್ನು ನಾಯಕನನ್ನು ಮಾಡಿದ್ದಾರೆ. ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗ ಇವರನ್ನು ಸಿಎಂ ಮಾಡಿಲ್ಲ. ಪರಮೇಶ್ವರ ಅವರನ್ನು ಕುತಂತ್ರದಿಂದ ಸೋಲಿಸಿದ್ರು. ಕೆಪಿಸಿಸಿ ಕಚೇರಿಯಲ್ಲಿ ವೋಟಿಂಗ್ ಆದಾಗ ಖರ್ಗೆ ಅವರಿಗೆ ವೋಟ್ ಬರಲಿಲ್ಲ. ಕೆಪಿಸಿಸಿ ಕಚೇರಿಯಿಂದ ಮಲ್ಲಿಕಾರ್ಜುನ ಖರ್ಗೆ ಕಣ್ಣೀರು ಹಾಕುತ್ತಾ ಹೊರಬಂದರು
ಕಾಂಗ್ರೆಸ್ ಅಧಿಕಾರಕ್ಕೆ ಬರದೆ ಇದ್ದಾಗ ಇವರ ಹೆಸರು ಹೇಳ್ತಾರೆ. ನರೇಂದ್ರ ಮೋದಿ ಅವರ ಕಾಲದಲ್ಲಿ ಕಾಂಗ್ರೆಸ್ ಈ ದೇಶದಲ್ಲಿ ಇಂಪ್ರೂವ್ ಮೆಂಟ್ ಆಗಲ್ಲ. ಇದೀಗ ಖರ್ಗೆ ಅವರ ಹೆಸರೇಳೋದು ಮೋಸದಾಟ. ರಾಹುಲ್ ಗಾಂಧಿ ಅವರಿಗೆ ಮೆಚ್ಯೂರಿಟಿ ಇಲ್ಲ ಎಂದು ಕಾರಜೋಳ ವ್ಯಂಗ್ಯ ಮಾಡಿದರು.
ಇದೇ ವೇಳೆ ಹಾಲು ಕುಡಿದೆ ಸಾಯ್ತಾರೆ ಅನ್ನುವಾಗ ಅವರಿಗೆ ವಿಷ ಯಾಕೆ ಕೊಡಬೇಕು..? ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾರ್ಮಿಕವಾಗಿ ಮಾತನಾಡಿದರು.
40 ಕ್ಕಿಂತ ಹೆಚ್ಚು ಶಾಸಕರು ಅತೃಪ್ತರಾಗಿದ್ದಾರೆ. ಬಿ ಆರ್ ಪಾಟೀಲ್, ರಾಯರೆಡ್ಡಿ ಅಂಥವರು ಅಸಮಾಧಾನವನ್ನು ಹಾಕಿದ್ದಾರೆ. ಉಳಿದವರು ಹೇಳೋ ಧೈರ್ಯ ಮಾಡ್ತಿಲ್ಲ ಅಷ್ಟೇ..ನಾವು ಯಾವ ಶಾಸಕರ ಸಂಪರ್ಕದಲ್ಲಿಯೂ ಇಲ್ಲ. ಹಾಲು ಕುಡಿದು ಸಾಯ್ತಾರೆ ಅಂತ ಗೊತ್ತಿದೆ. ಹೀಗಿರುವಾಗ ಅವರಿಗೆ ವಿಷ ಯಾಕೆ ಕೊಟ್ಟು ಪಾಪ ಕಟ್ಕೊಬೇಕು. ನಮ್ಮಲ್ಲಿ ಸೋಮಣ್ಣ, ಸೋಮಶೇಖರ್ ಸೇರಿ ಯಾರು ಪಕ್ಷ ಬಿಟ್ಟು ಹೋಗಲ್ಲ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಯಾರೂ ಹೋಗೋ ಧೈರ್ಯ ಮಾಡ್ತಿಲ್ಲ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರಕ್ಕೆ ಬರುವ ಎಲ್ಲಾ ಆದಾಯವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಅನುದಾನ ತೆಗೆದಿಟ್ಟು ಬೇರೆ ಕೆಲಸಗಳನ್ನು ಮಾಡಬೇಕು. ಕಾಂಗ್ರೆಸ್ ಬಂದ ಮೇಲೆ ಒಂದು ಕಾಮಗಾರಿ ಸ್ಯಾಂಕ್ಷನ್ ಆಗಿಲ್ಲ. ಮಹದಾಯಿಗೆ ಸಾವಿರ ಕೋಟಿ ತೆಗೆದಿಟ್ಟು ಟೆಂಡರ್ ಕರೆದಿದ್ದೆವು. ನಾವು ತೆಗೆದಿಟ್ಟ ಹಣವನ್ನೂ ವಾಪಸ್ ಪಡೆದಿದ್ದಾರೆ. ಮಹದಾಯಿ ಯೋಜನೆ ಟೆಂಡರ್ ಸಹ ಕರೆದಿದ್ದೆವು. ಅದನ್ನು ಮುಂದುವರಿಸಿಕೊಂಡು ಹೋಗುವ ಬದಲಿಗೆ ಕಾಂಗ್ರೆಸ್ ಗಿಮಿಕ್ ಮಾಡ್ತಿದೆ ಎಂದು ದೂರಿದರು.
ಇದೇ ವೇಳೆ ರಾಜ್ಯದಲ್ಲಿ ಭ್ರಷ್ಟಾಚಾರಕ್ಕಾಗಿ ಆಡಳಿತ ನಡೆದಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪ ಮಾಡಿದ್ದಾರೆ. ಹೇಗೆ ದುಡ್ಡು ವಸೂಲಿ ಮಾಡಬೇಕು ಅನ್ನೋದೆ ಚಿಂತೆ ಆಗಿದೆ. ನಾವು ಮಂಜೂರು ಮಾಡಿದ ಕೆಲಸ ನಿಲ್ಲಿಸಿ ಲಂಚ ಕೇಳುತ್ತಿದ್ದಾರೆ. ಸರ್ಕಾರಿ ನೌಕರರನ್ನು ಎಷ್ಟು ಟ್ರಾನ್ಸಫರ್ ಮಾಡೋದು.?
ಕಳೆದ ಆರು ತಿಂಗಳಿಂದ ಅದೇ ಒಂದು ಉದ್ಯೋಗ ಆಗಿದೆ. ಮೇ ತಿಂಗಳಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ
ಆ ಸಮಯದಲ್ಲಿ ನೂರೆಂಟು ಸಂಸಾರ ಸಮಸ್ಯೆ ಇರತ್ತೆ . ಆ ಸಮಯದಲ್ಲಿ ಟ್ರಾನ್ಸಫರ್ ಮಾಡಿದ್ರೆ ಅವರೇನು ಆತ್ಮಹತ್ಯೆ ಮಾಡಿಕೊಳ್ಳಬೇಕಾ..? ಇವರ ಆಡಳಿತಕ್ಕೆ ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳಬೇಕಾ..? ಸರ್ಕಾರಿ ನೌಕರರಿಗೆ ದೊಡ್ಡ ಕಿರುಕುಳ ಇದೆ. 40 ವರ್ಷದ ಅನುಭವದಲ್ಲಿ ಇಂತಹ ದರಿದ್ರ ಸರ್ಕಾರ ನೋಡಿಲ್ಲ. ಎಲ್ಲೋ ಇದ್ದವರನ್ನು ಟ್ರಾನ್ಸಫರ್ ಮಾಡಿದ್ರೆ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಬೇಕು. ಅನೇಕ ಜನ ವಿಷ ತೆಗೆದುಕೊಂಡಿದ್ದಾರೆ ಎಂದು ಪರೋಕ್ಷವಾಗಿ ರಾಜ್ಯದಲ್ಲಿ ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳೋ ಪರಸ್ಥಿತಿ ಬಂದಿದೆ. ಸರ್ಕಾರಿ ವರ್ಗಾವಣೆ ಉದ್ಯೋಗ ಆಗಬಾರದು
ವರ್ಗಾವಣೆ ಮಾಡಿ ಸುಗ್ಗಿ ಮಾಡ್ತೀನಿ ಅಂದ್ರೆ ಯಾರೂ ಒಪ್ಪಲ್ಲ. ರಾಜ್ಯದಲ್ಲಿ ಇವತ್ತು ಚುನಾವಣೆ ನಡೆದ್ರೆ ಕಾಂಗ್ರೆಸ್ 10 ಸೀಟ್ ಬರಲ್ಲ. ರಾಜ್ಯದಲ್ಲಿ 52 ಪರ್ಸೆಂಟ್ ಸರ್ಕಾರ ಇದೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ರು ಎಂದು ಆರೋಪಿಸಿದರು.
“ನಾನು ಆಕಾಂಕ್ಷಿ ಅಲ್ಲ”
ಇದೇ ವೇಳೆ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಗಳನ್ನ
ಆಯ್ಕೆ ಮಾಡ್ತಾರೆ. ಬಿಜಾಪುರ ಕ್ಷೇತ್ರ ಸೇರಿ ಯಾವುದೇ ಕ್ಷೇತ್ರವನ್ನು ನಾನು ಕೇಳಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದರು.